ಬೆಂಗಳೂರು: ಗುಂತಕಲ್ ವಿಭಾಗದ ಗೂತ್ತಿ–ಧರ್ಮಾವರಂ ನಡುವೆ ಧರ್ಮಾವರಂ ಹಂತ-3ರ ಯಾರ್ಡ್ ಆಧುನೀಕರಣ ಹಾಗೂ ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಫೆಬ್ರವರಿ 12 ರಿಂದ 22ರವರೆಗೆ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.
ರದ್ದು: ರೈಲು ಸಂಖ್ಯೆ 77213 ಗುಂತಕಲ್–ಹಿಂದೂಪುರ ಡೆಮು ಫೆಬ್ರವರಿ 16 ರಿಂದ 22 ರವರೆಗೆ ಮತ್ತು ರೈಲು ಸಂಖ್ಯೆ 77214 ಹಿಂದೂಪುರ–ಗುಂತಕಲ್ ಡೆಮು ರೈಲು ಫೆಬ್ರವರಿ 17 ರಿಂದ 23, 2026 ರವರೆಗೆ ರದ್ದುಗೊಳ್ಳಲಿವೆ.
ಭಾಗಶಃ ರದ್ದು: ಫೆಬ್ರವರಿ 17 ರಿಂದ 22 ರವರೆಗೆ ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು–ಅನಂತಪುರ ಮೆಮು ರೈಲು ಅನಂತಪುರದ ಬದಲಿಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂದವರೆಗೆ ಮಾತ್ರ ಸಂಚರಿಸಲಿದೆ. ಅದೇ ರೀತಿ, ಫೆಬ್ರವರಿ 17 ರಿಂದ 22 ರವರೆಗೆ ರೈಲು ಸಂಖ್ಯೆ 66560 ಅನಂತಪುರ–ಕೆಎಸ್ಆರ್ ಬೆಂಗಳೂರು ಮೆಮು ರೈಲು ಅನಂತಪುರದ ಬದಲಿಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.








