ಮಂಗಳೂರು: ತೀವ್ರ ಕುತೂಹಲ ಮೂಡಿಸಿದ್ದಂತ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಎಸ್ಐಟಿ ತಂಡ ರಚಿಸಿತ್ತು. ಈ ತಂಡವು ನಾಳೆಯಿಂದ ತನಿಖೆ ಆರಂಭಿಸಲಿದೆ. ತನಿಖೆಯ ಭಾಗವಾಗಿ ನಾಳೆ ಧರ್ಮಸ್ಥಳಕ್ಕೆ ಎಸ್ಐಟಿ ತಂಡವು ಭೇಟಿ ನೀಡಲಿದೆ.
ಹೌದು ರಾಜ್ಯ ಸರ್ಕಾರದಿಂದ ರಚಿಸಿರುವಂತ ಎಸ್ಐಟಿ ತಂಡವು ನಾಳೆ ಧರ್ಮಸ್ಥಳಕ್ಕೆ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ತನಿಖೆ ನಡೆಸಲು ಭೇಟಿ ನೀಡಲಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ವಿಶೇಷ ತಂಡವು ನಾಳೆ ಧರ್ಮಸ್ಥಳಕ್ಕೆ ತೆರಳಲಿದೆ.
ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಲಿರುವಂತ ಎಸ್ಐಟಿ ಅಧಿಕಾರಿಗಳ ತಂಡವು, ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಧರ್ಮಸ್ಥಳ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಪ್ರಕರಣದ ಮಾಹಿತಿಯನ್ನು ಪಡೆಯಲಿದೆ. ಆ ಬಳಿಕ ಅಧಿಕೃತವಾಗಿ ನಾಳೆ ಪ್ರಕರಣದ ಎಸ್ಐಟಿಗೆ ಹಸ್ತಾಂತರವಾಗಲಿದೆ.
ಸಾರ್ವಜನಿಕರೇ ಗೂಡ್ಸ್ ರೈಲಿನಲ್ಲಿ ಪ್ರಯಾಣ ನಿಷೇಧ, ಶಿಕ್ಷಾರ್ಹ ಅಪರಾಧ, ಕೇಸ್ ಫಿಕ್ಸ್: ರೈಲ್ವೆ ಇಲಾಖೆ ಎಚ್ಚರಿಕೆ
ರಾಜ್ಯದಲ್ಲಿ ‘ಅನಧಿಕೃತ ಐಪಿ ಸೆಟ್’ ಹೊಂದಿರುವ ರೈತರಿಗೆ ‘ಸಿಎಂ ಸಿದ್ಧರಾಮಯ್ಯ’ ಗುಡ್ ನ್ಯೂಸ್