ಬೆಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳ ಹುಡುಕಾಟ ಮುಂದುವರೆದಿದೆ. ಇಂದು ಪಾಯಿಂಟ್ ನಂ.6ರಲ್ಲಿ 12 ಅಸ್ಥಿ ಪಂಜರದ ಮೂಳೆಗಳು ದೊರೆತಿರುವುದಾಗಿ ಹೇಳಲಾಗುತ್ತಿದೆ. ಇದೇ ಹೊತ್ತಿನಲ್ಲಿ ಶವ ಹೂತಿಟ್ಟ ಬಗ್ಗೆ ತಪ್ಪೊಪ್ಪಿಕೊಂಡಿರುವಂತ ಅನಾಮಿಕ ವ್ಯಕ್ತಿ ಆರಂಭದಲ್ಲಿ ತಲೆ ಬುರುಡೆಯೊಂದಿಗೆ ಕೋರ್ಟ್, ಪೊಲೀಸರಿಗೆ ನೀಡಿದಂತ ದೂರಿನ ನಂತ್ರ, ಅದು ಎಲ್ಲಿಯದು ಎನ್ನುವ ಬಗ್ಗೆ ಸ್ಥಳ ಪರಿಶೀಲನೆ, ತನಿಖೆ ಈವರೆಗೆ ಏಕಿಲ್ಲ ಎಂದು ಹೈಕೋರ್ಟ್ ವಕೀಲ ಪ್ರಸನ್ನ ಕುಮಾರ್ ಪಿ ದಾರೋಜಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವಂತ ಅವರು, ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಬಗ್ಗೆ ಅಸ್ಥಿ ಪಂಜರಗಳ ಹುಡುಕಾಟದಲ್ಲಿ ಎಸ್ಐಟಿ ತೊಡಗಿದೆ. ಶೋಧ ಕಾರ್ಯಾಚರಣೆ ಉತ್ತಮ ರೀತಿಯಲ್ಲೇ ನಡೆಯುತ್ತಿದೆ. ನಿನ್ನೆ ಕೆಲ ವಸ್ತುಗಳು ಶೋಧ ಕಾರ್ಯಾಚರಣೆ ವೇಳೆಯಲ್ಲಿ ದೊರೆತಿವೆ ಎಂದು ಹೇಳಲಾಗುತ್ತಿದೆ. ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದು ಏನೆಲ್ಲಾ ದೊರೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನೂ ಅನಾಮಿಕ ವ್ಯಕ್ತಿ ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡು ಶರಣಾದಂತ ಸಂದರ್ಭದಲ್ಲಿ, ಠಾಣೆಗೆ ಹಾಜರಾಗಿ ನೀಡಿದಂತ ದೂರಿನ ಸಂದರ್ಭದಲ್ಲಿ ತಲೆ ಬುರುಡೆಯೊಂದನ್ನು ಜೊತೆಗೆ ತಂದಿದ್ದಾಗಿ ಹೇಳಲಾಗುತ್ತಿದೆ. ಈ ದೂರಿನ ಬಳಿಕ ರಾಜ್ಯ ಸರ್ಕಾರದಿಂದ ಎಸ್ಐಟಿ ತನಿಖೆಗೆ ವಹಿಸಲಾಗಿತ್ತು. ಈಗ ಅದು ನಡೆಯುತ್ತಿದೆ. ಆದರೇ ಅನಾಮಿಕ ದೂರುದಾರ ವ್ಯಕ್ತಿ ನೀಡಿದಂತ ತಲೆ ಬುರುಡೆ ವಿಚಾರ ಏನಾಯ್ತು ಎಂದು ಕೇಳಿದ್ದಾರೆ.
ಪೊಲೀಸರು ಅನಾಮಿಕ ವ್ಯಕ್ತಿ ನೀಡಿದಂತ ತಲೆ ಬುರುಡೆ ಬಗ್ಗೆ ತನಿಖೆ ಕೈಗೊಂಡಿದ್ದಾರಾ? ಧರ್ಮಸ್ಥಳ ಕೇಸ್ ವಹಿಸಿಕೊಂಡಂತ ಎಸ್ಐಟಿ ಅಧಿಕಾರಿಗಳು ಅನಾಮಿಕ ಹಾಜರುಪಡಿಸಿದಂತ ತಲೆ ಬುರುಡೆ ಬಗ್ಗೆ ಯಾಕೆ ಈವರೆಗೆ ತಲೆ ಕೆಡಿಸಿಕೊಂಡಿಲ್ಲ.? ಅನಾಮಿಕ ಎಲ್ಲಿಂದ ತಲೆ ಬುರುಡೆ ತಂದು ಕೊಟ್ಟಿದ್ದಾನೆ? ಆ ಸ್ಥಳದ ಮಹಜರ್ ನಡೆಸುವ ಬದಲು ಪಾಯಿಂಟ್ ನಂ.1, 2, 3, 4 ರೀತಿಯಲ್ಲಿ ಆತ ತೋರಿಸಿದ, ಗುರುತಿಸಿದ ಸ್ಥಳದಲ್ಲಿ ಅಸ್ಥಿ ಪಂಜರಗಳಿಗೆ ಅಗೆದು ಶೋಧಿಸುವಂತ ಕೆಲಸ ಮಾತ್ರವೇ ಆಗುತ್ತಿದೆ. ಆದರೇ ಆತನೇ ತಂದು ಕೊಟ್ಟಿದ್ದ ತಲೆ ಬುರುಡೆ ಎಲ್ಲಿಯದು? ಅದನ್ನು ಎಲ್ಲಿ ಹೂಳಲಾಗಿದ್ದು ಎನ್ನುವ ಬಗ್ಗೆ ಈವರೆಗೆ ತನಿಖೆಯನ್ನೇ ಕೈಗೊಳ್ಳುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ಕೇಸ್ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಸುರಿಯುತ್ತಿರುವಂತ ಮಳೆ, ನೇತ್ರಾವದಿ ನದಿಯ ಹೊರೆತದ ನಡುವೆಯೂ ಅನಾಮಿಕ ತೋರಿಸಿದಂತ ಸ್ಥಳಗಳಲ್ಲಿ ಅಸ್ತಿ ಪಂಜರಗಳಿಗೆ ಶೋಧಿಸುತ್ತಿದ್ದಾರೆ. ಆ ಮೂಲಕ ಉತ್ತಮವಾಗಿಯೇ ಪ್ರಕರಣದ ಸಂಬಂಧ ತನಿಖೆಯ ಕಾರ್ಯೋನ್ಮುಖರಾಗಿದ್ದಾರೆ. ಇದರ ನಡುವೆ ಅನಾಮಿಕ ನೀಡಿದಂತ ತಲೆ ಬುರುಡೆಯ ಬಗ್ಗೆ, ಸ್ಥಳ ಪರಿಶೀಲನೆ ಬಗ್ಗೆ, ಮಹಜರು ಮಾಡುವಂತ ಕೆಲಸವನ್ನು ಮಾಡಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು