ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ವಿರುದ್ಧ ಅವರ ಮೊದಲ ಪತ್ನಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಆತನ ಮುಖವಾಡವನ್ನು ಬಟಾ ಬಯಲು ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮಾಸ್ಕ್ ಮ್ಯಾನ್ ಅವರ ಮೊದಲ ಪತ್ನಿ ನಾನಾಗಿದ್ದೇನೆ. 1999ರಲ್ಲಿ ಮದುವೆಯಾಗಿ ನಾನು, ಅವರು 7 ವರ್ಷಗಳ ಕಾಲ ಜೊತೆಗಿದ್ದೆವು. ನನಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ ಎಂದರು.
ಮಾಸ್ಕ್ ಮ್ಯಾನ್ ನಮ್ಮ ಜೊತೆಗೆ ಇದ್ದಂತ ಸಂದರ್ಭದಲ್ಲಿ ಆತ ಬಳಿಯಲ್ಲಿ ಒಳ್ಳೆಯ ತನ ಇರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದನು. ನನಗೆ ಹೊಡೆದು ಚಿತ್ರಹಿಂಸೆ ಕೊಡ್ತಿದ್ದನು ಎಂಬುದಾಗಿ ಆರೋಪಿಸಿದರು.
ವಿಚ್ಚೇದನದ ವೇಳೆ ಜೀವನಾಂಶ ವಿಚಾರವಾಗಿ ಸುಳ್ಳು ಹೇಳಿದ್ದನು. ನಾನು ಕೆಲಸ ಮಾಡುತ್ತಿಲ್ಲ ಎಂಬುದಾಗಿ ಕೋರ್ಟ್ ಗೆ ಸುಳ್ಳು ಹೇಳಿದ್ದನು. ಅಲ್ಲೂ ಕೂಡ ನಮಗೆ ನ್ಯಾಯ ಸಿಗಲಿಲ್ಲ ಎಂಬುದಾಗಿ ಮಾಸ್ಕ್ ಮ್ಯಾನ್ ಮೊದಲ ಪತ್ನಿ ತಿಳಿಸಿದ್ದಾರೆ.
ನನ್ನ, ನನ್ನ ಮಕ್ಕಳನ್ನು ನನ್ನ ತಾಯಿಯೇ ಸಾಕಿದಳು. ಮದುವೆ ಬಳಿಕ ಧರ್ಮಸ್ಥಳದಲ್ಲಿಯೇ ನಾವು 7 ವರ್ಷ ನೆಲೆಸಿದ್ದೆವು. ಆತ ಹೇಳುತ್ತಿರುವುದು ಸುಳ್ಳು. ಹಣಕ್ಕಾಗಿ ಹೀಗೆ ಹೇಳುತ್ತಿರಬಹುದು. ಧರ್ಮಸ್ಥಳ ಕ್ಷೇತ್ರ ಎಂದರೆ ನಮ್ಮ ಮನೆಯವರಿಗೆಲ್ಲ ಪ್ರೀತಿ ಎಂಬುದಾಗಿ ಮಂಡ್ಯದಲ್ಲಿ ಮಾಸ್ಕ್ ಮ್ಯಾನ್ ಮೊದಲ ಪತ್ನಿ ತಿಳಿಸಿದ್ದಾರೆ.