ಧರ್ಮಸ್ಥಳ: ಧರ್ಮಸ್ಥಳ ಕೇಸ್ ಸಂಬಂಧ ಅಸ್ತಿ ಪಂಜರಗಳಿಗಾಗಿ ಎಸ್ಐಟಿ ತಂಡದಿಂದ ಶೋಧಕಾರ್ಯ ಮುಂದುವರೆದಿದೆ. ಇದೇ ಸಂದರ್ಭದಲ್ಲಿ 6ನೇ ಪಾಯಿಂಟ್ ನ ಸ್ಥಳದಲ್ಲಿ ಅಸ್ತಿಪಂಜರದ ಮೂಳೆಗಳು ದೊರೆತಿವೆ. ದೊರೆತ ಎರಡು ಮೂಳೆಗಳು ಪುರುಷನ ಕೈ ಭಾಗದ ಮೂಳೆಗಳು ಎಂಬುದಾಗಿ ಹೇಳಲಾಗುತ್ತಿದೆ.
ಧರ್ಮಸ್ಥಳದ ನೇತ್ರಾವತಿ ಘಟ್ಟದಲ್ಲಿ ಎಸ್ಐಟಿಯಿಂದ ಅಸ್ಥಿಪಂಜರಗಳ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿರುವಂತ ಸಂದರ್ಭದಲ್ಲಿ 6ನೇ ಸ್ಥಳದಲ್ಲಿ ಮಣ್ಣು ಅಗೆಯುವಂತ ಸಂದರ್ಭದಲ್ಲಿ ಎರಡು ಮೂಳೆಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳ ತಂಡ ಸ್ಥಳದಲ್ಲಿ ಪರದೆಯನ್ನು ಕಟ್ಟಿಕೊಂಡು ಮಣ್ಣು ಅಗೆಯುವಂತ ಕಾರ್ಯವನ್ನು ಮುಂದುವರೆಸಲಾಗಿದೆ. ಸಣ್ಣ ಇಟಾಚಿ ಬಳಸಿ ಮೂಳೆ ಪತ್ತೆಯಾದಂತ ಸ್ಧಳದಲ್ಲಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮತ್ತಷ್ಟು ಅಸ್ಥಿ ಪಂಜರದ ಭಾಗಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಅಂದಹಾಗೇ ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಎನ್ನುವಂತೆ 6ನೇ ಪಾಯಿಂಟ್ ನಲ್ಲಿ ಸಿಕ್ಕಿರುವಂತ ಎರಡು ಮೂಳಗಳು ಪುರುಷನ ಕೈ ಭಾಗದ ಮೂಳೆಗಳು ಎನ್ನಲಾಗುತ್ತಿದೆ. ಆ ಬಗ್ಗೆ ಸ್ಥಳದಲ್ಲಿರುವಂತ ಪೊರೆನ್ಸಿಕ್ ಅಧಿಕಾರಿಗಳ ತಂಡವು ಪರೀಕ್ಷೆಯಲ್ಲಿ ತೊಡಗಿದೆ.