ಧರ್ಮಸ್ಥಳ: ಇಲ್ಲಿನ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವುಗಳು ದೊರೆಯುತ್ತಿವೆ. 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಕ್ಕೆ ಜಿಪಿಆರ್ ಬಳಕೆಗೆ ಎಸ್ಐಟಿ ತೀರ್ಮಾನಿಸಿದೆ. ಇದಲ್ಲದೇ ಇನ್ಮುಂದೆ ಮಾಸ್ಕ್ ಮ್ಯಾನ್ ಎಷ್ಟೇ ಪಾಯಿಂಟ್ ತೋರಿಸಿದರೂ, ಅವುಗಳನ್ನೆಲ್ಲ ಜಿಪಿಆರ್ ಬಳಸಿ ಶೋಧ ಕಾರ್ಯ ಮಾಡಲು ನಿರ್ಧರಿಸಿದೆ.
ಹೌದು 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಕ್ಕೆ ಎಸ್ಐಟಿ ಅಧಿಕಾರಿಗಳು ಜಿಪಿಆರ್ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಮಾಸ್ಕ್ ಮ್ಯಾನ್ ಕೂಡ ಜಿಪಿಆರ್ ಬಳಕೆ ಮಾಡಿ ಶೋಧಕ್ಕೆ ಮನವಿ ಮಾಡಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಪಾಯಿಂಟ್ ನಂ.13ರಲ್ಲಿ ಸುಮಾರು 10ರಿಂದ 15 ಅಡಿ ಆಳದ ಗುಂಡಿ ತೋಡಲು ಮನವಿ ಮಾಡಲಾಗಿದೆ. ಸಾಕಷ್ಟು ಹೆಣಗಳನ್ನು ಹೂತಿರುವುದಾಗಿ ಮಾಸ್ಕ್ ಮ್ಯಾನ್ ತಿಳಿಸಿದ್ದಾರೆ. ಹೀಗಾಗಿ ಮಾಸ್ಕ್ ಮ್ಯಾನ್ ತೋರಿಸಿರುವ ಜಾಗದಲ್ಲಿ ಟ್ರಾನ್ಸ್ ಫಾರ್ಮರ್ ಇದೆ. ಆಳವಾದ ಗುಂಡಿ ತೋಡುವಂತೆ ಮನವಿ ಹಿನ್ನಲೆಯಲ್ಲಿ ಜಿಪಿಆರ್ ಬಳಕೆಗೆ ನಿರ್ಧರಿಸಲಾಗಿದೆ.
ನಿನ್ನೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಜಿಪಿಆರ್ ಬಳಕೆ ಮಾಡುವಂತ ತೀರ್ಮಾನ ಕೈಗೊಳ್ಳಲಾಗಿತ್ತು. ಇನ್ಮುಂದೆ ಮಾಸ್ಕ್ ಮ್ಯಾನ್ ಎಷ್ಟೇ ಸ್ಥಳ ತೋರಿಸಿದರೂ ಜಿಪಿಆರ್ ಮೂಲಕ ಶೋಧ ಕಾರ್ಯಕ್ಕೆ ಎಸ್ಐಟಿ ತೀರ್ಮಾನಿಸಿದೆ ಎಂಬುದಾಗಿ ತಿಳಿದು ಬಂದಿದೆ.
BREAKING: ಸ್ಯಾಂಡಲ್ ವುಡ್ ನಟ, ಸಾಹಸ ಸಿಂಹ ಡಾ.ವಿಷ್ಣವರ್ಧನ್ ಸಮಾಧಿ ನೆಲಸಮ
SHOCKING : ರಾಜಸ್ಥಾನದಲ್ಲಿ `ರಾಕ್ಷಸಿ ಕೃತ್ಯ’ : ಬೀದಿ ನಾಯಿಗಳನ್ನು ಬೆನ್ನಟ್ಟಿ ಗುಂಡು ಹಾರಿಸಿ ಬರ್ಬರ ಹತ್ಯೆ.!