ಬೆಂಗಳೂರು: ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದೆ. ಇದೇ ಹೊತ್ತಿನಲ್ಲಿ ಧರ್ಮಸ್ಥಳ ಪ್ರಕರಣ ಕುರಿತಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಇಂತಹ ಪ್ರಕರಣ ಕುರಿತಂತೆ ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಎಂಎಲ್ಸಿ ಡಿ.ಎಸ್ ಅರುಣ್ ಸಭಾಪತಿಗಳಿಗೆ ಪತ್ರ ಬರೆದಿದ್ದಾರೆ.
ಇಂದು ವಿಧಾನ ಪರಿಷತ್ ಸಭಾಪತಿ ಅವರಿಗೆ ಪತ್ರ ಬರೆದಿರುವಂತ ಅವರು, ನಮ್ಮ ರಾಜ್ಯದ ಧಾರ್ಮಿಕ ಹೆಮ್ಮೆ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರುವ ಧರ್ಮಸ್ಥಳ, ಲಕ್ಷಾಂತರ ಹಿಂದೂ ಭಕ್ತರ ಭಾವನೆಯ ಕೇಂದ್ರವಾಗಿದೆ. ಇಂತಹ ಪವಿತ್ರ ಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಯೊಬ್ಬರು ಯಾವುದೇ ದೃಢವಾದ ಸಾಕ್ಷ್ಯವಿಲ್ಲದೆ ಆರೋಪ ಮಾಡಿರುವುದರ ಕುರಿತು ಇತ್ತೀಚಿಗೆ ಬಹಳಷ್ಟು ದೃಶ್ಯ ಮಾಧ್ಯಮದಲ್ಲಿ, ಡಿಜಿಟಲ್ ಪ್ಲಾಟ್ಟಾರ್ಮಿನಲ್ಲಿ ವರದಿ ಪ್ರಕಟವಾಗಿರುತ್ತದೆ ಎಂದಿದ್ದಾರೆ.
ಇಂತಹ ಸಂಗತಿ ಅತ್ಯಂತ ಖಂಡನೀಯ ಮತ್ತು ಹಿಂದೂ ಸಮಾಜದ ಭಾವನೆಗೆ ಅವಮಾನವಾಗಿದೆ.ಇಂತಹ ಸುಳ್ಳು ಮತ್ತು ಉದ್ದೇಶಪೂರಿತ ಆರೋಪಗಳಿಂದ ಸನಾತನ ಧರ್ಮದ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡುವುದು ಧರ್ಮ ವಿರೋಧಿ ಶಕ್ತಿಗಳ ಹಳೆಯ ನಿದ್ದೆ ಹಿಂದೂ ಧರ್ಮ, ಹಿಂದೂತ್ವದ ಮೌಲ್ಯಗಳು ಹಾಗೂ ಧರ್ಮಸ್ಥಳದ ಹೆಗ್ಗಳಿಕೆಯನ್ನು ಹಾಳುಮಾಡಲು ಇಂತಹ ಯತ್ನಗಳು ನಡೆಯುತ್ತಾ ಬಂದಿವೆ ಎಂದು ಹೇಳಿದ್ದಾರೆ.
ಜನರ ಭಕ್ತಿ ಭಾವನೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿರಬೇಕು. ತನಿಖೆಯನ್ನು ತ್ವರಿತಗೊಳಿಸಿ, ಈ ಆರೋಪದ ಹಿಂದಿರುವ ನಿಜಸ್ವರೂಪವನ್ನು ಬಹಿರಂಗಪಡಿಸಬೇಕು, ಸದನದ ಮೂಲಕ ಗೃಹ ಸಚಿವರನ್ನು ಬಲವಾಗಿ ತನಿಖೆಯ ಪ್ರಗತಿ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿ,ಹಿಂದೂ ಧರ್ಮದ ಪಾವಿತ್ರ್ಯವನ್ನು ಹಾಳುಮಾಡಲು ಯತ್ನಿಸುವವರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಬೇಕು ಎಂದು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ್ದಾರೆ.
BIG BREAKING: ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ | K.N.Rajanna resigns
BREAKING: ಲೋಕಸಭೆಯಲ್ಲಿ ಪರಿಷ್ಕೃತ ಆದಾಯ ತೆರಿಗೆ ಮಸೂದೆ ಮಂಡಿಸಿದ ನಿರ್ಮಲಾ ಸೀತಾರಾಮನ್