ಬೆಂಗಳೂರು: ಧರ್ಮಸ್ಥಳ ಕೇಸ್ ಸಂಬಂಧಿಸಿದಂತೆ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಬೆಂಗಳೂರಿನ 16ನೇ ಸಿಸಿಹೆಚ್ ನ್ಯಾಯಾಲಯವು ರದ್ದುಗೊಳಿಸಿತ್ತು. ಅಲ್ಲದೇ ಈ ಸಂಬಂಧದ ಅರ್ಜಿ ವಿಚಾರಣೆ ನಡೆಸುತ್ತಿದ್ದಂತ ನ್ಯಾಯಾಧೀಶರು ಕೂಡ ಹಿಂದೆ ಸರಿದಿದ್ದರು. ಈ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮಗಳ ಮೇಲಿನ ತಡೆಯಾಜ್ಞೆ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹರ್ಷೇಂದ್ರ ಹೆಗ್ಗಡೆ ಅವರು ಮೇಲ್ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್ ರ್ಯಾಪರ್ ಕುಡ್ಲ ಎಂಬುವರು ಸಲ್ಲಿಸಿದ್ದಂತ ನಿರ್ಬಂಧಕಾಜ್ಞೆ ತೆರವು ಅರ್ಜಿ ವಿಚಾರಣೆ ನಡೆಸಿ ರದ್ದುಗೊಳಿಸಿತ್ತು. ಕಳೆದ ನಿನ್ನಯಷ್ಟೇ 338 ಜನರ ಮೇಲೆ ತಡೆಯಾಜ್ಞೆಯನ್ನು ಬೆಂಗಳೂರಿನ 16ನೇ ಸಿಸಿಹೆಚ್ ನ್ಯಾಯಾಲಯ ರದ್ದುಗೊಳಿಸಿತ್ತು. ಇದೀಗ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹರ್ಷೇಂದ್ರ ಹೆಗಡೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಇಂದು ಸಿಜೆಐ ಬಿಆರ್ ಗವಾಯಿ, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ, ವಿನೋದ್ ಚಂದ್ರ ಅವರನ್ನೊಳಗೊಂಡ ನ್ಯಾಯಪೀಠವು ಪ್ರಸ್ತಾಪಿಸಲಾಯಿತು. ಹರ್ಷೇಂದ್ರ ಪರ ವಕೀಲರು ಸುಮಾರು 8,000 ಯೂಟ್ಯೂಬ್ ಚಾನಲ್ ಗಳು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅವಹೇಳನಕಾರಿ ವಸ್ತು ವಿಷಯ ಭಿತ್ತರಿಸಿರುವ ಬಗ್ಗೆ ವಾದ ಮಂಡಿಸಿದರು. ಈ ವಾದವನ್ನು ಆಲಿಸಿದಂತ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ನಾಳೆ ಸುಪ್ರೀಂ ಕೋರ್ಟ್ ಯಾವ ಆದೇಶ ಪ್ರಕಟಿಸಲಿದೆ ಎಂಬುದುನ್ನು ಕಾದು ನೋಡಬೇಕಿದೆ.
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು