ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದ ಬಳಿಯಲ್ಲಿ ಪಾಯಿಂಟ್.1 ರಲ್ಲಿ ಅಸ್ಥಿ ಪಂಜರಕ್ಕಾಗಿ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ದೊರೆತಿತ್ತು. ಆ ಬಗ್ಗೆ ತನಿಖೆ ನಡೆಸಿರುವಂತ ಎಸ್ಐಟಿ ತಂಡವು, ಅವುಗಳ ರಹಸ್ಯವನ್ನು ಬಯಲು ಮಾಡಿದ್ದಾರೆ.
ಹೌದು ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಪಾಯಿಂಟ್ ನಂ.1ರಲ್ಲಿ ಸಿಕ್ಕಿದ್ದಂತ ಡೆಬಿಟ್, ಪಾನ್ ಕಾರ್ಡ್ ತನಿಖೆ ನಡೆಸಿದ್ದು, ಈ ತನಿಖೆಯಲ್ಲಿ ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಇನ್ನೂ ಪಾನ್ ಕಾರ್ಡ್ ವಾರಸುದಾರ ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡೆಬಿಟ್ ಕಾರ್ಡ್ ಮೃತಪಟ್ಟ ವ್ಯಕ್ತಿಯ ತಾಯಿಗೆ ಸೇರಿದ್ದೆಂದು ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆಯನ್ನು ಸಂಪರ್ಕಿಸಿ ಎಸ್ಐಟಿ ಮಾಹಿತಿ ಪಡೆದಿದೆ.
ಈ ಬಗ್ಗೆ ಎಸ್ಐಟಿ ಮಾಹಿತಿ ನೀಡಿದ್ದು, ಡೆಬಿಡ್ ಕಾರ್ಟ್ ಮಹಿಳೆ ಇನ್ನೂ ಜೀವಂತವಾಗಿದ್ದಾಳೆ. ಆದರೇ ಪಾನ್ ಕಾರ್ಡ್ ವಾರಸುದಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸುವ ಮೂಲಕ, ಡೆಬಿಟ್, ಪಾನ್ ಕಾರ್ಡ್ ಗೊಂದಲಕ್ಕೆ ತೆರೆ ಎಳೆದಿದೆ.
GOOD NEWS: ರಾಜ್ಯದ ‘NHM ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಗುತ್ತಿಗೆ ಮುಂದುವರೆಸಿ ಸರ್ಕಾರ ಆದೇಶ | NHM Employees
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು