ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಚಿನ್ನಯ್ಯಗೆ ಸೇರಿದಂತ ಒಂದು ಕೀ ಪ್ಯಾಡ್, ಮತ್ತೊಂದು ಆಂಡ್ರ್ಯಾಯ್ಡ್ ಪೋನ್ ಅನ್ನು ಎಸ್ಐಟಿ ಸೀಜ್ ಮಾಡಿದೆ. ಅಲ್ಲದೇ ಸುಜಾತ ಭಟ್ ಬಳಿಯಲ್ಲಿದ್ದಂತ ಒಂದು ಪೋನ್ ಕೂಡ ವಶಕ್ಕೆ ಎಸ್ಐಟಿ ಪಡಿದಿರುವುದಾಗಿ ತಿಳಿದು ಬಂದಿದೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ, ಸುಜಾತ ಪೋನ್ ನಲ್ಲಿ ಬುರುಡೆ ಸೀಕ್ರೇಟ್ ರಿವೀಲ್ ಮಾಡೋದಕ್ಕೆ ಎಸ್ಐಟಿ ಇಬ್ಬರ ಬಳಿಯಲ್ಲಿದ್ದಂತ ಪೋನ್ ಗಳನ್ನು ಸೀಜ್ ಮಾಡಿದೆ. ಚಿನ್ನಯ್ಯ ಅವರ ಒಂದು ಕೀ ಪ್ಯಾಡ್ ಪೋನ್, ಒಂದು ಆಂಡ್ರಾಯ್ಡ್ ಪೋನ್ ಹಾಗೂ ಸುಜಾತ ಭಟ್ ಒಂದು ಪೋನ್ ಎಸ್ಐಟಿ ಸೀಜ್ ಮಾಡಿದೆ.
ಇಬ್ಬರಿಂದ ಸೀಜ್ ಮಾಡಿರುವಂತ ಪೋನ್ ಗಳಿಂದ ಕಾಲ್ ಲೀಸ್ಟ್ ರಿಟ್ರೀವ್ ಮಾಡೋದಕ್ಕೆ ಎಸ್ಐಟಿ ಮುಂದಾಗಿದೆ. ಪೋನ್ ರೆಕಾರ್ಡ್ ನಲ್ಲಿ ಮಹತ್ವದ ಮಾಹಿತಿ ಇರೋ ಬಗ್ಗೆಯೂ ಹುಡುಕಾಟ ನಡೆಸಿದೆ.
ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಳ್ಳತನ ಮಾಡಲು ಬಂದವನಿಂದಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ