ಧರ್ಮಸ್ಥಳ: ಶವ ಹೂತಿದ್ದಾಗಿ ದೂರುದಾರ ತಪ್ಪೊಪ್ಪಿಕೊಂಡ ನಂತ್ರ, ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಸೂಚಿಸಿತ್ತು. ಇಂದು ಎಸ್ಐಟಿಯಿಂದ 13ನೇ ಪಾಯಿಂಟ್ ನಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳ ತೆಗೆದರೂ ಯಾವುದೇ ಅಸ್ಥಿ ಪಂಜರ ಪತ್ತೆಯಾಗಿಲ್ಲ. ಹೀಗಾಗಿ ಇಂದಿನ ಉತ್ಕನನ ಕಾರ್ಯವನ್ನು ಎಸ್ಐಟಿ ಮುಕ್ತಾಯಗೊಳಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಈವರೆಗೆ 1 ರಿಂದ 13 ಪಾಯಿಂಟ್ ಗಳಲ್ಲಿ ಅಸ್ಥಿ ಪಂಜರಗಳಿಗಾಗಿ ಉತ್ಕನನ ಕಾರ್ಯವನ್ನು ನಡೆಸಲಾಗುತ್ತಿದೆ. ಪಾಯಿಂಟ್ ನಂ.6ರಲ್ಲಿ ಶೋಧ ಕಾರ್ಯದ ವೇಳೆಯಲ್ಲಿ ಮಾತ್ರ ಅಸ್ಥಿ ಪಂಜರಗಳು ದೊರೆತಿದ್ದರು. ಅದರ ಹೊರತಾಗಿ ಈವರೆಗೆ ದೂರುದಾರ ಗುರುತಿಸಿದಂತ ಪಾಯಿಂಟ್ ನಲ್ಲಿ ಅಸ್ಥಿ ಪಂಜರ ದೊರೆತಿಲ್ಲ.
ಇಂದು ಪಾಯಿಂಟ್ ನಂ.13ರಲ್ಲಿ ಜಿಪಿಆರ್ ಯಂತ್ರವನ್ನು ಬಳಸಿ ಸ್ಕ್ಯಾನ್ ಮಾಡಲಾಯಿತು. ಈ ಬಳಿಕ ಜಿಪಿಆರ್ ಯಂತ್ರದಲ್ಲಿ ದಾಖಲಾಗಿದ್ದಂತ ಡೇಟಾವನ್ನು ತಂತ್ರಜ್ಞರು ಪರಿಶೀಲನೆ ನಡೆಸಿದರು. ಆ ನಂತ್ರ ಎರಡು ಜೆಸಿಬಿ ಬಳಸಿ ಪಾಯಿಂಟ್ ನಂ.13ರಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳದವರೆಗೂ ತೆಗೆದರೂ ಯಾವುದೇ ಅಸ್ಥಿ ಪಂಜರ ದೊರೆಯಲಿಲ್ಲ. ಹೀಗಾಗಿ ಸ್ಥಳ ಮಹಜರು ನಡೆಸಿ, ಎಸ್ಐಟಿ ಅಧಿಕಾರಿಗಳು ಇಂದಿನ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದರು.
BREAKING: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ 16 ಜನರಿಗೆ ವಂಚನೆ: ಕೋರ್ಟ್ ಗೆ ಖಾಸಗಿ ದೂರು
BREAKING: ಶಿವಮೊಗ್ಗ ಜಿಲ್ಲೆಯಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ಡಿಜೆ ಸಿಸ್ಟಂ ಬಳಕೆ ನಿಷೇಧ-DC ಆದೇಶ