ಉತ್ತರ ಕನ್ನಡ: ಮಂಡ್ಯ ಜಿಲ್ಲೆಯ ಬಳಿಕ, ಉತ್ತರ ಕನ್ನಡಕ್ಕೂ ಧರ್ಮ ಧ್ವಜ ದಂಗಲ್ ಕಾಲಿಟ್ಟಿದೆ. ಅನುಮತಿ ಇದ್ದರೂ ಭಗವಧ್ವಜ ನಿರ್ಮಿಸಿದ್ದನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದಕ್ಕಾಗಿ ಗ್ರಾಮಸ್ಥರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಉತ್ತರ ಕನ್ಡನ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಬೀಚ್ ನಲ್ಲಿ ಅನುಮತಿ ಪಡೆದು ವೀರಸಾರ್ವರ್ಕರ್ ವೃತ್ತದಲ್ಲಿ ಭಗವಧ್ವಜ, ನಾಮಫಲಕ ಹಾಗೂ ಧ್ವಜ ಕಟ್ಟೆಯನ್ನು ನಿರ್ಮಿಸಲಾಗಿತ್ತು.
ಮಂಡ್ಯದಲ್ಲಿ ಭಗವಧ್ವಜ ವಿವಾದದ ಬಳಿಕ, ಭಟ್ಕಳದ ತೆಂಗಿನಗುಂಡಿ ಬೀಚ್ ನಲ್ಲಿ ಅನುಮತಿ ಪಡೆದು ನಿರ್ಮಿಸಲಾಗಿದ್ದಂತ ಭಗವಧ್ವಜವನ್ನು ತೆರವುಗೊಳಿಸಲಾಗಿದೆ ಎಂಬುದಾಗಿ ಆರೋಪ ಕೇಳಿ ಬಂದಿದೆ.
ಭಗವಧ್ವಜ, ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದಕ್ಕಾಗಿ, ಭಟ್ಕಳದ ತೆಂಗಿನಗುಂಡಿ ಬೀಚ್ ನಲ್ಲಿ ಪಿಡಿಓ ಅಧಿಕಾರಿಯನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಯನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಇದು ಅಂಚೆ ಕಚೇರಿಯ ಅದ್ಭುತ ಯೋಜನೆ: ನೀವು ತುಂಬಾ ಬಡ್ಡಿಯನ್ನು ಪಡೆಯುತ್ತೀರಿ
BREAKING: ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ಗೆ 10 ವರ್ಷ ಜೈಲು ಶಿಕ್ಷೆ