ಬೆಂಗಳೂರು: ಈಗಾಗಲೇ ಅಲಾಲ್ ವರ್ಸಸ್ ಜಟಕಾ ಕಟ್ ಮಾಂಸ ವಿವಾದದ ಬಳಿಕ, ಈಗ ಗೌರಿ ಗಣೇಶ ಹಬ್ಬದ ( Gowri Ganesha Festival ) ಸಂದರ್ಭದಲ್ಲಿಯೂ ಧರ್ಮ ದಂಗಲ್ ಬಿಸಿ ಎದ್ದಿದೆ. ಈ ಹಬ್ಬದಂದು ಹಿಂದೂ ವರ್ತಕರಿಂದಲೇ ವಸ್ತುಗಳನ್ನು ಖರೀದಿಸುವಂತೆ ಅಭಿಯಾನ ಆರಂಭಗೊಂಡಿದೆ.

BREAKING NEWS: ‘ಕಾಂಗ್ರೆಸ್ ಹೊಸ ಅಧ್ಯಕ್ಷ’ರ ಆಯ್ಕೆಗಾಗಿ ಚುನಾವಣೆಗೆ ಮುಹೂರ್ತ ಫಿಕ್ಸ್: ಅ.17ರಂದು ಮತದಾನ, ಅ.19ಕ್ಕೆ ಮತಏಣಿಕೆ | Congress presidential election

ಈ ಕುರಿತಂತೆ ವಿಶ್ವ ಹಿಂದೂ ಪರಿಷತ್ ನಿಂದ ಅಭಿಯಾನ ಆರಂಭಿಸಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವರ್ಷದ ಗಣೇಶ ಹಬ್ಬಕ್ಕೆ ನಾನು ಹಿಂದೂ ವರ್ತಕರಿಂದಲೇ ಹೊಸ ಬಟ್ಟೆ, ಹೂವು, ಹಣ್ಣು, ದಿನಸಿ, ಖರೀದಿಸಿದೆ. ನೀವು ಎಂಬುದಾಗಿ ಪೋಸ್ಟ್ ಮಾಡಲಾಗಿದೆ.

ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.?

ಗಣೇಶ ಹಬ್ಬದ ಸಂದರ್ಭದಲ್ಲಿಯೇ ಎದ್ದಿರುವಂತ ಧರ್ಮ ದಂಗಲ್ ಬಗ್ಗೆ ಮುಸ್ಲೀಂ ಮುಖಂಡರು ಕಿಡಿಕಾರಿದ್ದು, ಹಿಂದೂ ಸಂಘಟನೆಗಳ ಯಾವ ಅಭಿಯಾನ ಸಕ್ಸಸ್ ಆಗಿದೆ ಎಂಬುದಾಗಿ ಪ್ರಶ್ನಿಸಿದ್ದಾರೆ. ಹಲಾಲ್, ಮಾವಿನಹಣ್ಣು ಖರೀದಿ, ಚಾಲಕರ ನಿಷೇಧ ಮಾಡಿದಂತ ಯಾವುದಾದ್ರು ಅಭಿಯಾನ ಕ್ಲಿಕ್ ಆಗಿದ್ಯಾ ಎಂದು ವಾಗ್ದಾಳಿ ನಡೆಸಿದ್ದಾರೆ.

Share.
Exit mobile version