ಬೆಂಗಳೂರು: ರಾಜ್ಯ ಸರ್ಕಾರದಿಂದ 66 ಪೌರಾಯುಕ್ತರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಒಂದು ದಿನದ ಮಟ್ಟಿಗೆ ಸಾಗರ ನಗರಸಭೆ ಪೌರಾಯುಕ್ತರಾಗಿ ಧನಂಜಯ ಡಿ.ಬಿ ಅವರನ್ನು ನೇಮಕ ಮಾಡಿ ಆದೇಶಿಸಿದೆ.
ಈ ಸಂಬಂಧ ಪೌರಾಡಳಿತ ಇಲಾಖೆಯಿಂದ ವರ್ಗಾವಣೆ ಅಧಿಸೂಚನೆ ಹೊರಡಿಸಲಾಗಿದ್ದು, ಉಡುಪಿ ಜಿಲ್ಲೆಯ ಯೋಜನಾ ನಿರ್ದೇಶಕರ ಕಚೇರಿಯ ಜಿಲ್ಲಾ ನಗರ ವ್ಯವಸ್ಥಾಪಕರಾಗಿದ್ದಂತ ಧನಂಜಯ ಡಿ.ಬಿ ಅವರನ್ನು ಒಂದು ದಿನದ ಮಟ್ಟಿಗೆ ಸಾಗರ ನಗರಸಭೆಯ ಪೌರಾಯುಕ್ತರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. ತದನಂತರ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರೆಸಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಸಾಗರ ನಗರಸಭೆಯ ಪೌರಾಯುಕ್ತರಾಗಿ ಧನಂಜಯ ಡಿ.ಬಿ ಅವರನ್ನು ಒಂದು ದಿನದ ಮಟ್ಟಿಗೆ ವರ್ಗಾವಣೆ ಮಾಡಿರುವ ಕಾರಣ, ಹಾಲಿ ನಗರಸಭೆಯ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಒಂದು ದಿನದ ಮಟ್ಟಿಗೆ ತಮ್ಮ ಹುದ್ದೆಯಿಂದ ವರ್ಗಾವಣೆಗೊಂಡಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಒಂದು ದಿನದ ಮಟ್ಟಿಗೆ ’66 ಪೌರಾಯುಕ್ತ’ರನ್ನು ವರ್ಗಾವಣೆ ಮಾಡಿ ‘ರಾಜ್ಯ ಸರ್ಕಾರ’ ಆದೇಶ