ಬೆಂಗಳೂರು: ವಿಡಿಯೋ-ಆಡಿಯೋ ವೈರಲ್ ಬೆನ್ನಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್ ರಾಮಚಂದ್ರ ರಾವ್ ಅವರು ಹತ್ತು ದಿನಗಳ ಕಾಲ ರಜೆಯನ್ನು ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಯಾರ ಕೈಗೂ ಸಿಗದೇ ಅವರು ಸದ್ಯ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ವಕೀಲರ ಜೊತೆಗೆ ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವುದಕ್ಕೆ ನಿರ್ಧಾರ ಮಾಡಿದ್ದಾರ ಎನ್ನಲಾಗಿದೆ.
ಘಟನೆ ಹಿನ್ನಲೆ : ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಕಾಣಿಸಿಕೊಂಡಿರುವ ಅಶ್ಲೀಲವ ವಿಡಿಯೋ ವೈರಲ್ ಆಗಿದೆ. ಪ್ರಸ್ತುತ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್ ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲಿದ್ದಾಗ ಮಹಿಳೆಯೊಂದಿಗೆ ಚುಂಬಿಸುತ್ತಿರುವಾಗ ಮತ್ತು ಮುದ್ದಾಡುತ್ತಿರುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ನಡುವೆ ಆರ್ ರಾಮಚಂದ್ರ ರಾವ್ ಮಹಿಳೆ ಜೊತೆಗೆ ಮಾತನಾಡಿರುವ ಆಡಿಯೋವೊಂದು ಕೂಡ ವೈರಲ್ ಆಗಿದೆ. ಆಡಿಯೋದಲ್ಲಿ ಬಂಗಾರಿ ಅಂಥ ಮಹಿಳೆ ಜೊತೆಗೆ ಮಾತನಾಡುವುದನ್ನು ಕೇಳಿಸಿಕೊಳ್ಳಹುದಾಗಿದೆ. ನಿನ್ನ ನಗು ಸ್ವೀಟ್ ಅಂತ ಹೇಳಿದ್ದಾರೆ. ದಿನ ನಿನ್ನ ನೋಡುತ್ತ ಇರಬೇಕು. ನಿನ್ನ ನನ್ನ ತೊಡೆ ಮೇಲೆ ಕೂರಿಸಿಕೊಂಡು ಮುದ್ದಾಡಬೇಕು ಅಂತ ಹೇಳಿದ್ದಾರೆ. ನಿನ್ನ ಜೊತೆಗೆ ಮಾತನಾಡುವುದಕ್ಕೆ ಬೆಡ್‌ರೂಮ್‌ಗೆ ಬರಬೇಕು ಅಂತ ಹೇಳ ಬಹುದು ಅಂತ ಹೇಳಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಐಪಿಎಸ್ ಅಧಿಕಾರಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ವಿಡಿಯೊ ಕಪೋಲಕಲ್ಪಿತವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.
“ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ವೀಡಿಯೊಗಳನ್ನು ನಿರ್ಮಿಸಲಾಗಿದೆ. ನಾನು ವಕೀಲರನ್ನು ಭೇಟಿ ಮಾಡುತ್ತೇನೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಪ್ರಕರಣವನ್ನು ದಾಖಲಿಸುತ್ತೇನೆ” ಎಂದು ಅಧಿಕಾರಿ ಪ್ರತಿಕ್ರಿಯಿಸಿದರು. ವೀಡಿಯೊವನ್ನು ಅವರ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆಯೇ ಎಂದು ಕೇಳಿದಾಗ, ರಾವ್ ಅವರು ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಿದರು.
ಆದಾಗ್ಯೂ, ಅವರು ಅದರ ಬಗ್ಗೆ ವಿವರಿಸಲಿಲ್ಲ ಅಥವಾ ಬೆಳಗಾವಿಯಲ್ಲಿನ ತಮ್ಮ ಕಾರ್ಯಚಟುವಟಿಕೆ ಮತ್ತು ಗೃಹ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದ ವೀಡಿಯೊ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸಲಿಲ್ಲ. 47 ಸೆಕೆಂಡ್‌ಗಳ ಅವಧಿಯ ದಿನಾಂಕವಿಲ್ಲದ ವೀಡಿಯೊವನ್ನು ತನ್ನ ಚೇಂಬರ್‌ನೊಳಗೆ ಮೊಬೈಲ್ ಫೋನ್ ಬಳಸಿ ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ ಮತ್ತು ಇದು ಬಹು ವಿಡಿಯೋ ಕ್ಲಿಪ್‌ಗಳ ಸಂಕಲನವಾಗಿದೆ ಎಂದು ಹೇಳಲಾಗುತ್ತದೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯೊಳಗೆ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.








