ನವದೆಹಲಿ : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 80 ವರ್ಷದ ಪ್ರಯಾಣಿಕರೊಬ್ಬರು ವಿಮಾನದಿಂದ ಟರ್ಮಿನಲ್’ಗೆ ನಡೆದುಕೊಂಡು ಹೋಗುವಾಗ ಗಾಲಿಕುರ್ಚಿ ನೀಡದ ಕಾರಣ ಸಾವನ್ನಪ್ಪಿದ ನಂತರ ಏರ್ ಇಂಡಿಯಾಕ್ಕೆ 30 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಫೆಬ್ರವರಿ 16ರಂದು ಈ ಘಟನೆ ನಡೆದಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತ್ವರಿತ ಕ್ರಮ ಕೈಗೊಂಡಿದ್ದು, ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಳಿದೆ. ಪ್ರತಿಕ್ರಿಯೆಯನ್ನ ಪರಿಶೀಲಿಸಿದ ನಂತರ, ನಿಯಂತ್ರಕವು ಏರ್ ಇಂಡಿಯಾವನ್ನ ತಪ್ಪಿತಸ್ಥರೆಂದು ಕಂಡುಕೊಂಡಿದ್ದು, 30 ಲಕ್ಷ ರೂ.ಗಳ ದಂಡವನ್ನ ವಿಧಿಸಿದೆ.
ಅಂದ್ಹಾಗೆ, ಪ್ರಯಾಣಿಕನ ಪತ್ನಿಗೆ ಗಾಲಿಕುರ್ಚಿಯನ್ನ ಒದಗಿಸಲಾಗಿದೆ ಮತ್ತು ಸಿಬ್ಬಂದಿ ಮತ್ತೊಂದು ಗಾಲಿಕುರ್ಚಿಯನ್ನ ವ್ಯವಸ್ಥೆ ಮಾಡುವಾಗ ಕಾಯುವಂತೆ ಕೇಳಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಆದ್ರೆ, ಆತ ತನ್ನ ಹೆಂಡತಿಯೊಂದಿಗೆ ಟರ್ಮಿನಲ್’ಗೆ ನಡೆದುಕೊಂಡು ಹೋದ ಎಂದು ಏರ್ ಇಂಡಿಯಾ ಹೇಳಿದೆ.
BREAKING: ಬಳ್ಳಾರಿಯಲ್ಲಿ ಅಭಿಮಾನಿ ಕಾಲಿನ ಮೇಲೆ ಹರಿದ ‘ನಟ ಯಶ್’ ಬೆಂಗಾವಲು ಕಾರು: ಕಾಲಿಗೆ ಗಾಯ
ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ : ಸಿಎಂ ಸಿದ್ದರಾಮಯ್ಯ
BREAKING : ಬಂಗಾಳಕೊಲ್ಲಿಯಲ್ಲಿ ಪ್ರಭಲ ಭೂಕಂಪ ; 4.2 ತೀವ್ರತೆ ದಾಖಲು |Earthquake