ಮಂಗಳೂರು: ತಮ್ಮ ನಿವೇಶನ ನೆಲಸಮಗೊಳಿಸಲು ಲ್ಯಾಟರೈಟ್ ಕಲ್ಲು ತೆಗೆಯಲು ಅನುಮತಿ ಕೇಳಿದಂತ ವ್ಯಕ್ತಿಗೆ 5 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಂತ ವೇಳೆಯಲ್ಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕೃಷ್ಣವೇಣಿ ಎಂಬುವರಿಗೆ ಗಣೇಶ್ ಶೆಟ್ಟಿ ಎಂಬುವರು ತಮ್ಮ ನಿವೇಶನವನ್ನು ನೆಲಸಮಗೊಳಿಸಲು ಲ್ಯಾಟರೈಟ್ ಕಲ್ಲು ತೆಗೆಯಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು.
ಇಂತಹ ಗಣೇಶ್ ಶೆಟ್ಟಿ ಅವರಿಗೆ ಅನುಮತಿ ನೀಡಲು 5 ಲಕ್ಷ ಲಂಚಕ್ಕೆ ಬೇಡಿಕೆಯನ್ನು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೃಷ್ಣವೇಣಿ ಇಟ್ಟಿದ್ದರು. ಹೀಗಾಗಿ ಗಣೇಶ್ ಶೆಟ್ಟಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು 5 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ಮಂಗಳೂರು ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿಯನ್ನು ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಈ ಮೂಲಕ 5 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
SHOCKING: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ 10 ಬಾರಿ ಚಾಕುವಿನಿಂದ ಇರಿದು ಪತಿ ಹತ್ಯೆ
‘ಥಗ್ ಲೈಫ್’ ವಿವಾದ: ಕಮಲ್ ಹಾಸನ್ ಭಾಷಾ ಹೇಳಿಕೆಗೆ ಬಹಿಷ್ಕಾರ ಕರೆ | Thug of life