ಬೆಂಗಳೂರು: . 40 ಶಾಸಕರ ಜೊತೆ ಡಿಕೆ ಶಿವಕುಮಾರ್ ಬಿಜೆಪಿಗೆ ಬರಲು ಕಾಯುತ್ತಿದ್ದಾರೆ. ನಾವು ಬಾಗಿಲು ತೆಗೆದರೆ ಒಳಗೆ ನುಗ್ಗಿಬಿಡ್ತಾರೆ. ಆದರೆ, ನಾವು ಬಾಗಿಲು ತೆಗೆಯುತ್ತಿಲ್ಲ ಅಂತ ಆರ್.ಆರ್ ನಗರ ಶಾಸಕ ಮುನಿರತ್ನ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದ ವೇಳೇಯಲ್ಲಿ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಕಾಂಗ್ರೆಸ್‌ನಲ್ಲಿ 4 ಉಪ ಮುಖ್ಯಮಂತ್ರಿಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ಈ ಕಡೆ ಬರುವುದು ಬೆಸ್ಟ್ ಎಂದು ಅವರೇ ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು. ಇನ್ನೂ ಡಿಕೆ ಶಿವಕುಮಾರ್ ಅವರೇ 40 ಶಾಸಕರ ಜೊತೆ ಬಿಜೆಪಿಗೆ ಬರಲು ತಯಾರಾಗಿ ಕಾಯುತ್ತಿದ್ದಾರೆ. ನಾವು ಬಾಗಿಲು ತೆಗೆದರೆ ಒಳಗೆ ಬಂದುಬಿಡ್ತಾರೆ. ಆದರೆ, ನಾವು ಬಾಗಿಲು ತೆಗೆಯುತ್ತಿಲ್ಲ. ನಾವು ನಮ್ಮವರನ್ನು ಕಾಂಗ್ರೆಸ್‌ಗೆ ಕಳುಹಿಸುವ ಪ್ರಶ್ನೆಯೇ ಇಲ್ಲ ಅಂದರು.