ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಆಳವಾದ ಅನುಭವ ಹೊಂದಿರುವ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಪೋರ್ಟಲ್ ಮೂಲಕ ರಾಜ್ಯ ಹಾಗೂ ದೇಶಕ್ಕೆ ಹೊಸ ಮುನ್ನುಡಿ ಬರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಕಿಯೋನಿಕ್ಸ್ ಸಮಸ್ಯೆ ರೂಪಿಸಿರುವ ಇ-ಕಾಮರ್ಸ್ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ತಂತ್ರಜ್ಞಾನದ ಮೂಲಕವೇ ಈಗ ಅಭಿವೃದ್ಧಿ ಸಾಧ್ಯ, ತಂತ್ರಜ್ಞಾನದಿಂದಲೇ ಸಂಪತ್ತು, ಏಳ್ಗೆ ಎಂದು ಹೇಳಿದ ಉಪ ಮುಖ್ಯಮಂತ್ರಿಗಳು ಗ್ರಾಮೀಣ ಪ್ರದೇಶದ ಯುವಕರನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಸಂಖ್ಯೆಯಲ್ಲಿ ತರುವ ಮೂಲಕ ಗ್ರಾಮೀಣ ಯುವಕರಲ್ಲಿ ತಂತ್ರಜ್ಞಾನದ ವೃತ್ತಿ ಕೌಶಲ್ಯದ ಅರಿವು ಮೂಡಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಕಿಯೊನಿಕ್ಸ್ ಎದುರಿಸುತ್ತಿದ್ದ ಸಮಸ್ಯೆಗಳಿಗೆಹೊಸ ಇ-ಕಾಮರ್ಸ್ ಪೋರ್ಟಲ್ ಮೂಲಕ ಪರಿಹಾರ: ಪ್ರಿಯಾಂಕ್ ಖರ್ಗೆ
ಸರ್ಕಾರದ ವಿವಿಧ ಇಲಾಖೆಗಳು ತಮಗೆ ಅವಶ್ಯವಾಗುವ ಸಾಮಗ್ರಿಗಳನ್ನು ಜಾಗತಿಕ ಸ್ಪರ್ಧಾತ್ಮಕ ದರಗಳಲ್ಲಿ ಹೊಂದಲು ಅನುಕೂಲವಾಗುವಂತೆ ಕಿಯೋನಿಕ್ಸ್ ಹೊಸ ಇ-ಕಾಮರ್ಸ್ ಪೋರ್ಟಲ್‌ನ್ನು ಸಿದ್ಧಪಡಿಸಲಾಗಿದೆ, ಕಳೆದ ಎರಡು ವರ್ಷಗಳಿಂದ ಕಿಯೊನಿಕ್ಸ್ ಸಂಸ್ಥೆ ಎದುರಿಸುತ್ತಿದ್ದ ಹಲವಾರು ಸಮಸೈೆಗಳಿಗೆ ಈ ಪೋರ್ಟಲ್ ಪರಿಹಾರ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ: ಕಿಯೊನಿಕ್ಸ್ ಸಂಸ್ಥೆಯಲ್ಲಿ ಮಹತ್ತರ ಸುಧಾರಣೆ ಇ-ಪೋರ್ಟಲ್ ಮೂಲಕ ಪಾರದರ್ಶಕ ವ್ಯವಹಾರ ಸಾಧ್ಯ
ಕಿಯೋನಿಕ್ಸ್ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಸರಳಿಕರಣಗೊಳಿಸಲು ಹಾಗೂ ಪಾರ್ದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲಿಕರಣಗೊಳಿಸಲಾಗುತ್ತಿದೆ ಎಂದು ಹೇಳಿದ ಕಿಯೊನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಅವರು, ಸರ್ಕಾರದ ಬೇರೆ ಬೇರೆ ಇಲಾಖೆಗಳು ತಮಗೆ ಅವಶ್ಯವಾದ ಸಾಮಗ್ರಿಗಳನ್ನು ನಿಯಮಬದ್ಧವಾಗಿ ಹಾಗೂ ಪಾರದರ್ಶಕತೆಯಿಂದ ಕೂಡಿದ ದರಗಳಲ್ಲಿ ಕೊಳ್ಳಲು ಅನುಕೂಲವಾಗುವಂತೆ ‘ಕಿಯೋನಿಕ್ಸ್’ ಸಂಸ್ಥೆಯ ಇ-ಕಾಮರ್ಸ್ ಪೋರ್ಟಲ್ ಸಿದ್ದಪಡಿಸಿದ್ದು, ಕಿಯೊನಿಕ್ಸ್ ಸಂಸ್ಥೆ ಹೊಸ ರೂಪ ಹಾಗೂ ಆಶಯಗಳೊಂದಿಗೆ ಸೇವೆಗೆ ಸಿದ್ಧವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಿಯೊನಿಕ್ಸ್ ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕಗೊಂಡ ಸಿಬ್ಬಂದಿ ವರ್ಗದವರಿಗೆ ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಕ್ರೂಪ್ ಕೌರ್ ಭಾಗವಹಿಸಿದ್ದರು.
BREAKING: ಹೊಸ ದಾಖಲೆ ಬರೆದ ಚಿನ್ನ: ಇದೇ ಮೊದಲ ಬಾರಿಗೆ 1 ಲಕ್ಷ ರೂ.ಗೆ ತಲುಪಿದ ಚಿನ್ನದ ಬೆಲೆ | Gold Price Today
ಸ್ಮಾರ್ಟ್ ಮೀಟರ್ ಅವ್ಯವಹಾರ ತನಿಖೆಗೆ ಲೋಕಾಯುಕ್ತಕ್ಕೆ ದೂರು: ಡಾ.ಸಿ.ಎನ್.ಅಶ್ವತನಾರಾಯಣ್