ಬೆಂಗಳೂರು: ನಗರದ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಪ್ರಾಂಶುಪಾಲರು ಸೇರಿದಂತೆ ಇತರೆ ಉಪನ್ಯಾಸಕರ ವಿರುದ್ಧ ಮೃತ ವಿದ್ಯಾರ್ಥಿನಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಆಕ್ಸ್ ಫರ್ಡ್ ಕಾಲೇಜಿನ 6 ಲೆಕ್ಟರರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಬೆಂಗಳೂರಿನ ಆಕ್ಸ್ ಫರ್ಡ್ ಕಾಲೇಜಿನಲ್ಲಿ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಂತ ಯಶಸ್ವಿನಿ ಉಪನ್ಯಾಸಕರ ಕಿರುಕುಳಕ್ಕೆ ಬೇಸತ್ತು ಜನವರಿ.8ರಂದು ಚಂದಾಪುರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು.
ಮತ್ತೊಂದೆಡೆ ಯಶಸ್ವಿನಿ ತಾಯಿ ಪೊಲೀಸರಿಗೆ ಪ್ರಾಂಶುಪಾಲರು ಸೇರಿದಂತೆ ಕಿರುಕುಳ ನೀಡಿದ್ದ ಉಪನ್ಯಾಸಕರ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಬೆನ್ನಲ್ಲೇ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ಆರು ಲೆಕ್ಚರರ್ಸ್ ಕೆಲಸದಿಂದ ಆಡಳಿತ ಮಂಡಳಿಯು ವಜಾಗೊಳಿಸಲಾಗಿದೆ.
ಒಎಂಆರ್ ವಿಭಾಗದ ಲೆಕ್ಟರರ್ಸ್ ಗಳಾದಂತ ಡಾ.ಆನಿಮೋಲ್, ಡಾ.ಶಬಾನಾ, ಡಾ.ಪೈಕಾ, ಡಾ.ಸಿಂಧು, ಡಾ.ಸುಶ್ಮಿನಿ, ಡಾ.ಆಲ್ಬಾ ಎಂಬ ಆರು ಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸಿ ಆಕ್ಸ್ ಫರ್ಡ್ ಡೆಂಟಲ್ ಕಾಲೇಜು ಆಡಳಿತ ಮಂಡಳಿ ಆದೇಶಿಸಿದೆ.








