ಬೆಂಗಳೂರು: ಬೆಂಗಳೂರಿನಲ್ಲಿ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸಾವಿರಾರು ವಿಮಾನದ ಪ್ರಯಾಣಿಕರು ವಿಮಾನದಲೇ ಕಾಲ ಕಳೆದ ಸನ್ನಿವೇಶ ನಿರ್ಮಾಣ ವಾಗಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂದಾಜು 34 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ ಅಂತ ತಿಳಿದು ಬಂದಿದೆ. ದಟ್ಟ ಮಂಜು ಕರಗಿದ ಬಳಿಕ ಒಂದೊಂದೇ ವಿಮಾನಗಳು ಏರ್ಪೋರ್ಟ್ನಿಂದ ಟೇಕ್ ಆಪ್ ಆಗಲಿವೆ. ವಿಮಾನಗಳು ನಿರ್ಗಮನ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗಲಿದೆ ಅಂತ ತಿಳಿದು ಬಂದಿದೆ.