ಪಂಜಾಬ್‌: ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಯನ್ನು ಅಲ್ಲಿನ ಸಿಬ್ಬಂದಿಗಳು ದಾಖಲಿಸಿಕೊಳ್ಳದೇ, ಮಹಿಳೆ ಮಹಡಿಯ ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಪಂಜಾಬ್‌ನ ಪಠಾಣ್‌ಕೋಟ್‌ನ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.

ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಜಂಗ್ ಬಹದ್ದೂರ್ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ನನ್ನ ಪತ್ನಿಯ ಸ್ಥಿತಿ ಸರಿಯಿಲ್ಲ. ಅವಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿ ಮತ್ತು ವೈದ್ಯರಲ್ಲಿ ವಿನಂತಿಸಿದ್ದಾರೆ. ಆದ್ರೆ, ಯಾರೂ ಕೂಡ ಅವನ ಮಾತಿಗೆ ಪ್ರತಿಕ್ರಿಯಿಸಿಲ್ಲ.

ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆ ಆಸ್ಪತ್ರೆ ಮಹಡಿಯ ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಅಲ್ಲಿದ್ದವರು ಮಹಿಳೆಗೆ ಬಟ್ಟೆ ಹೊದಿಸಿ ಸಹಾಯಕ್ಕೆ ಮುಂದಾಗಿದ್ದಾರೆ. ಈ ಸರ್ಕಾರಿ ಆಸ್ಪತ್ರೆಯವರ ನಿರ್ಲ್ಯಕ್ಷ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಅದರ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಹಿಳೆ ಹೆರಿಗೆ ನಂತ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಅಲ್ಲಿಯ ಸಿಬ್ಬಂದಿ ಅವಳನ್ನು ಸ್ಟ್ರೆಚರ್‌ನಲ್ಲಿ ಸಾಗಿಸುವುದನ್ನು ಬಿಟ್ಟು ಕಾಲ್ನಡಿಗೆಯಲ್ಲಿಯೇ ಲೇಬರ್ ರೂಮ್ ಗೆ ಕರೆದೊಯ್ದಿದ್ದಾರೆ. ಜನರು ಮಾಡಿರುವ ವೀಡಿಯೋದಲ್ಲಿ ಮಹಿಳೆಯು ಆಸ್ಪತ್ರೆಯ ಲೇಬರ್ ರೂಮ್‌ಗೆ ಹೋಗುವ ದಾರಿಯಲ್ಲಿ ರಕ್ತದ ಕಲೆಗಳಿರುವ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

BREAKING NEWS: ಸೇನಾಪಡೆಗಳ ನೂತನ ಮುಖ್ಯಸ್ಥರಾಗಿ ʻಅನಿಲ್ ಚೌಹಾಣ್ʼ ಅಧಿಕಾರ ಸ್ವೀಕಾರ | India’s new CDS Anil Chauhan

BREAKING NEWS : ಬಿಬಿಎಂಪಿ ಚುನಾವಣೆಗೆ ಗ್ರೀನ್‌ ಸಿಗ್ನಲ್‌ : ಡಿ.31ರೊಳಗೆ ಚುನಾವಣೆ ನಡೆಸಲು ಹೈಕೋರ್ಟ್‌ ಸೂಚನೆ | BBMP elections

BIGG NEWS: ದಸರಾ ಗೋಲ್ಡ್ ಪಾಸ್‌ ದಂಧೆ ವಿಚಾರ, ನನ್ನ ಗಮನಕ್ಕೆ ಬಂದಿದೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ; ಎಸ್.ಟಿ ಸೋಮಶೇಖರ್‌ ಸ್ಪಷ್ಟನೆ

Share.
Exit mobile version