ಮೈಸೂರು: ದಸರಾ ಗೋಲ್ಡ್‌ ಪಾಸ್‌ ದಂಧೆ ವಿಚಾರವಾಗಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ಮಾತನಾಡಿದ ಅವರು, ಪಾಸ್‌ ದಂಧೆ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಫ್‌ ಐಆರ್‌ ದಾಖಲಿಸಲು ಕಮಿಷನರ್‌ ಗೂ ತಿಳಿಸಿದ್ದೇನೆ.

BIGG NEWS: ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ? ಎಂದು ಶೋಭಾ ಕರಂದ್ಲಾಜೆ ಗರಂ

 

10 ಸಾವಿರ ಗೋಲ್ಡ್‌ ಪಾಸ್‌ ಬಿಡುಗಡೆ ಮಾಡಲಾಗಿದೆ. ಆನ್‌ ಲೈನ್‌ ನಲ್ಲಿ 500 ಟಿಕೆಟ್‌ ಮಾರಾಟಕ್ಕೆ ಸೂಚಿಸಿದ್ದೇನೆ. ಆಫ್‌ ಲೈನ್‌ ಮಾರಾಟ ವೇಳೆ ಅವ್ಯವಹಾರ ಕಂಡುಬಂದಿದೆ. ತಪ್ಪಿತಸ್ಥರು ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಎಸ್.ಟಿ ಸೋಮಶೇಖರ್‌ ಹೇಳಿದ್ದಾರೆ.

BIGG NEWS: ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ? ಎಂದು ಶೋಭಾ ಕರಂದ್ಲಾಜೆ ಗರಂ

ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ 2022 ವಿದೇಶಿ, ದೇಶಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಿನ್ನೆ ಜಿಲ್ಲಾಡಳಿತ “ಗೋಲ್ಡ್‌ ಕಾರ್ಡ್‌” ಬಿಡುಗಡೆ ಮಾಡಿದೆ.  ಈ ಬೆನ್ನಲ್ಲೇ  ಪ್ರತಿ ಗೋಲ್ಡ್‌ ಕಾರ್ಡ್‌ ಮೌಲ್ಯ 4,999 ರೂಪಾಯಿ ಆಗಿದೆ. 4999 ರೂ ಮೌಲ್ಯದ ಕಾರ್ಡ್‌ 8000 ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ
ಸವಾರಿ ಇಂಟರ್‌ನ್ಯಾಷನಲ್‌ ಟ್ರಾವೆಲ್ಸ್‌ ಹೆಸರಿನಲ್ಲಿ ಪಾಸ್‌ ಮಾರಾಟ ಮಾಡಲಾಗುತ್ತಿದೆ. ಇನ್ನೂ ಸ್ವಲ್ಪ ದಿನ ಕಳೆದರೆ 10ಸಾವಿರ ರೂ. ಆಗುತ್ತದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಇನ್ನೂ ಎರಡೇ  “ಗೋಲ್ಡ್‌ ಕಾರ್ಡ್‌” ಕಾರ್ಡ್‌ ಉಳಿದಿದೆ ಎಂದು ದೂರವಾಣಿ ಕರೆ ಮೂಲಕ ತಿಳಿಸಲಾಗಿದೆ. 5 ಗೋಲ್ಡ್‌ ಕಾರ್ಡ್‌ ಖರೀದಿಸಿದರೆ 7 ಸಾವಿರಕ್ಕೆ ನೀಡುವುದಾಗಿ ಆಫರ್‌ ನೀಡಲಾಗುತ್ತಿದೆ.

Share.
Exit mobile version