Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ಕದನ ವಿರಾಮ ಉಲ್ಲಂಘನೆಯಾದರೆ ಪಾಕ್ ಗೆ ತಕ್ಕ ಪ್ರತ್ಯುತ್ತರ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

10/05/2025 11:32 PM

BREAKING: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ದೃಢಪಡಿಸಿದ ಕೇಂದ್ರ ಸರ್ಕಾರ: ಭಾರತೀಯ ಸೇನೆಗೆ ತಿರುಗೇಟಿಗೆ ಸೂಚನೆ

10/05/2025 11:27 PM

BREAKING: ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದ ಅರ್ಥವಾಗುತ್ತಿಲ್ಲ, ಶೀಘ್ರದಲ್ಲೇ ಭಾರತೀಯ ಸೇವೆ ಪ್ರತ್ಯುತ್ತರ: ಕೇಂದ್ರ ಗೃಹ ಸಚಿವಾಲಯ

10/05/2025 11:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾಧ್ಯಂತ ‘ಡೆಂಗ್ಯೂ’ ಆರ್ಭಟ: ‘ಆರೋಗ್ಯ ಇಲಾಖೆ’ಯಿಂದ ಈ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ
KARNATAKA

ರಾಜ್ಯಾಧ್ಯಂತ ‘ಡೆಂಗ್ಯೂ’ ಆರ್ಭಟ: ‘ಆರೋಗ್ಯ ಇಲಾಖೆ’ಯಿಂದ ಈ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ

By kannadanewsnow0911/07/2024 4:15 PM

ಬೆಂಗಳೂರು: ರಾಜ್ಯಾಧ್ಯಂತ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಎನ್ ವಿ ಬಿಡಿಸಿಪಿ, ಡೆಂಗ್ಯೂ ಜ್ವರ ಮುಂಜಾಗ್ರತೆ ಹಾಗೂ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ ಈ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಖಡಕ್ ಸೂಚನೆ ನೀಡಿದೆ.

ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಪ್ರಸ್ತುತ ರಾಜ್ಯದ ಡೆಂಗಿ ಜ್ವರ ಪರಿಸ್ಥಿತಿ ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ, ಡೆಂಗಿ ಜ್ವರ ಪಕರಣಗಳ ಚಿಕಿತ್ಸೆ ಹಾಗೂ ಸಮರ್ಪಕ ನಿರ್ವಹಣೆಯು ಪ್ರಮುಖವಾಗಿದ್ದು, ಫಲಿತಾಂಶ ಆಧಾರಿತವಾಗಿರುವುದು ಅಗತ್ಯವಾಗಿದೆ. ಅದರಂತೆ, ಸಂಬಂಧಪಟ್ಟವರು ಈ ಕೆಳಕಂಡ ಹೆಚ್ಚುವರಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.

1. ರಾಜ್ಯದ ದೈನಂದಿನ ಡೆಂಗಿ ಜ್ವರ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ಹಾಗೂ ಉಸ್ತುವಾರಿಗಾಗಿ, ಎನ್ ವಿ ಬಿ ಡಿಸಿ ಪಿ ವಿಭಾಗದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯಸೌಧ, ಬೆಂಗಳೂರು, ಇಲ್ಲಿ ‘ಡೆಂಗಿ ವಾರ್ ರೂಮ್ ‘ಅನ್ನು ಸಕ್ರಿಯಗೊಳಿಸುವುದು.
2. ಎಲ್ಲಾ ಜಿಲ್ಲೆಗಳು / ಬಿಬಿಎಂಪಿ ವ್ಯಾಪ್ತಿಯ ಡೆಂಗಿ ಜ್ವರ ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ದತ್ತಾಂಶ/ಮಾಹಿತಿ ಸಂಗ್ರಹಣೆಗಾಗಿ ‘ಕಂಟ್ರೋಲ್ ರೂಮ್ / ಡೆಂಗಿ ವಾರ್ ರೂಮ್ ‘ಅನ್ನು ಸಕ್ರಿಯಗೊಳಿಸುವುದು.
3. ಡೆಂಗಿ ಪರಿಸ್ಥಿತಿಯ ದೈನಂದಿನ ನಿಗಾವಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಅನ್ನು ರಚಿಸುವುದು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತಿ, ಪ್ರಾಜೆಕ್ಟ್ ಡೈರೆಕ್ಟರ್ – ನಗರಾಭಿವೃದ್ಧಿ, ವಿಭಾಗ ಮುಖ್ಯಸ್ಥರು – P & SM, ಮೆಡಿಕಲ್ ಕಾಲೇಜು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾಧ್ಯಕ್ಷರು – IMA & IAP, ಉಪನಿರ್ದೇಶಕರು – ಸಾರ್ವಜನಿಕ ಶಿಕ್ಷಣ, ಇವರುಗಳು ಸದರಿ ಟಾಸ್ಕ್ ಫೋರ್ಸ್ ನ ಸದಸ್ಯರಾಗಿರುತ್ತಾರೆ ಹಾಗೂ ಜಿಲ್ಲಾ ವಿಬಿಡಿ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಟಾಸ್ ಫೋರ್ಸ್ ನ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ವಾರಕ್ಕೊಮ್ಮೆ ಟಾಸ್ಕ್‌ ಫೋರ್ಸ್ ಸಭೆ ಸೇರಿ, ಡೆಂಗಿ ಜ್ವರ ನಿಯಂತ್ರಣ ನಿಯಂತ್ರಣಗಳನ್ನು ಪರಿಶೀಲಿಸಿ, ಸ್ಥಳೀಯ ಡೆಂಗಿ ಪರಿಸ್ಥಿತಿಯ ಅನ್ವಯ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು.

4. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಎಲ್ಲಾ ಮನೆಗಳು, ಶಾಲಾ-ಕಾಲೇಜು, ಕಛೇರಿಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ಚಟುವಟಿಕೆಯನ್ನು ಪೂರ್ಣಗೊಳಿಸುವುದು. ಪಟ್ಟಣ / ನಗರ ಪ್ರದೇಶದಲ್ಲಿ ಸದರಿ ಚಟುವಟಿಕೆಗೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ, ಆಯಾ ಸ್ಥಳೀಯ ಸಂಸ್ಥೆಗಳು (Urban Local Body) ದಿನ ಒಂದಕ್ಕೆ @Rs 200/- ಗಳ ಗೌರವಧನದಂತೆ ಅಗತ್ಯ ಸಂಖ್ಯೆಯ ಸ್ವಯಂ ಸೇವಕರನ್ನು ಒದಗಿಸುವುದು.
a) ಜೊತೆಗೆ ಡೆಂಗಿ ಜ್ವರ ನಿಯಂತ್ರಣ, ಚಿಕಿತ್ಸೆಯ ಸಂಬಂಧ ಅಗತ್ಯ ಆರೋಗ್ಯ ಶಿಕ್ಷಣ ಸಾಮಗ್ರಿಗಳೊಂದಿಗೆ, ಈಡಿಸ್ ಲಾರ್ವಾ ನಾಶ ಚಟುವಟಿಕೆಗೆ ಪ್ರತಿ ಶುಕ್ರವಾರ ಬೆಳಗ್ಗೆ (ಅಥವಾ ಜಿಲ್ಲಾ ಟಾಸ್ಕ್ ಫೋರ್ಸ್ ನಿರ್ಧರಿಸಿದ ವಾರದ ಇತರ ದಿನದಂದು) ಗ್ರಾಮ, ಪಟ್ಟಣ ಹಾಗೂ ಜಿಲ್ಲಾ ಮಟ್ಟದಲ್ಲಿ, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇತರ ಇಲಾಖೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವ್ಯಾಪಕ ಪುಚಾರ ನೀಡುವುದು. ಇದರಿಂದ, ಸಾರ್ವಜನಿಕರು ತಮ್ಮ ಮನೆಯ ಒಳಗೆ ಹಾಗೂ ಹೊರಗೆ ಲಾರ್ವಾ ನಿರ್ಮೂಲನೆ ಕಾರ್ಯವನ್ನು ಹಾಗೂ ನೀರಿನ ಸಂಗ್ರಹಣೆಗಳನ್ನು ಉಜ್ಜಿ ತೊಳೆದು ಸ್ವಚ್ಛಗೊಳಿಸುವ ಚಟುವಟಿಕೆಯನ್ನು ಸ್ವಯಂಪ್ರೇರಿತರಾಗಿ ಕೈಗೊಳ್ಳುವಂತೆ ಪ್ರೇರೇಪಿಸುವುದು.
b) ಸದರಿ ಚಟುವಟಿಕೆಯು ನಡೆದ ದಿನ ಮಧ್ಯಾಹ್ನ ನೀರು ಸರಬರಾಜು ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ, ಇದರಿಂದ ಸಾರ್ವಜನಿಕರು ಪುನಃ ಅಗತ್ಯ ನೀರಿನ ಸಂಗ್ರಹಣೆಯನ್ನು ಮಾಡಬಹುದಾಗಿದೆ
5. ಬಿಬಿಎಂಪಿ/ಜಿಲ್ಲೆಗಳು Hotspot ಅನ್ನು ಗುರುತಿಸಿ (Hotspot : an area with radius of about 100 meters within which two or more dengue positive cases have been reported), Hotspot ಗಳ ನಿಖರ ಮಾಹಿತಿ ( ಗ್ರಾಮ/ ಸ್ಥಳ/ ವಾರ್ಡ್)ಯನ್ನು ನಿಗದಿತ ನಮೂನೆಯಲ್ಲಿ State War Room ಗೆ ಸಲ್ಲಿಸುವುದು. ಸದರಿ ಕೆಳಕಂಡ ಕ್ರಮಗಳಿಂದ Hotspotಗಳ ಸಂಖ್ಯೆಯು ಇಳಿಮುಖವಾಗುವುದನ್ನು ಖಚಿತಪಡಿಸಿಕೊಳ್ಳುವುದೂ ಸಹ ಕಡ್ಡಾಯವಾಗಿದೆ: a) ಸದರಿ Hotspot ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವುಗೊಳಿಸುವುದು ಒಳಾಂಗಣ/ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ indoor space spray ಯನ್ನು ಕೈಗೊಂಡು ಮನೆಯ ಸದಸ್ಯರನ್ನು ಕನಿಷ್ಠ 30 ನಿಮಿಷಗಳ ಕಾಲ ಮನೆಗಳಿಂದ ಹೊರಗೆ ಇರುವಂತೆ ಸೂಚಿಸುವುದು.
b) ಸದರಿ ಸ್ಥಳಗಳಲ್ಲಿ Fever clinic ಗಳನ್ನು ತುರ್ತಾಗಿ ಸಕ್ರಿಯಗೊಳಿಸುವುದು.
c) ಈ ಪ್ರದೇಶಗಳಲ್ಲಿ, ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆಯ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು, ಹಾಗೂ ಕೈ-ಕಾಲು ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು.
i. ಸದರಿ ಉತ್ಪನ್ನವು ಲಭ್ಯವಿಲ್ಲದಿದ್ದಲ್ಲಿ, Citronella oil/ lemon grass oil ಗಳನ್ನು ಅಥವಾ DEET (N,N-diethyl-meta-toluamide) ಆಧಾರಿತ ಕ್ರೀಂ ಗಳನ್ನು ವಿತರಣೆಯನ್ನು ಸ್ಥಳೀಯ ಜಿಲ್ಲಾ ಆರೋಗ್ಯಾಧಿಕಾರಿಗಳು/ ಮುಖ್ಯ ಸಾರ್ವಜನಿಕ ಆರೋಗ್ಯ, ಬಿಬಿಎಂಪಿ, ಇವರು
ii. ಸದರಿ ಸೊಳ್ಳೆ ನಿರೋಧಕ ಎಣ್ಣೆ/ಕ್ರೀಂ ಗಳನ್ನು ನಿಯಮಾನುಸಾರ ಸ್ಥಳೀಯವಾಗಿ ಖರೀದಿಸಲು CSR/ದಾನಿಗಳ ವಂತಿಕೆಯನ್ನು ಅಥವಾ
ಆರೋಗ್ಯಾಧಿಕಾರಿಗಳು ಪರಿಗಣಿಸಬಹುದಾಗಿದೆ.

ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ/ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ARS/AbAr- K ಅನುದಾನವನ್ನು ನಿಯಮಾನುಸಾರ ಬಳಸುವುದು. ಆದಾಗ್ಯೂ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ/ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯತ್/ ತಾಲ್ಲೂಕು ಪಂಚಾಯತ್ ಗಳು ಭರಿಸುವುದು.

iii. ಸೊಳ್ಳೆ ನಿರೋಧಕ ಎಣ್ಣೆ/ಕ್ರೀಂ ಗಳನ್ನು ಪಡೆದ ಮನೆಯ ಸದಸ್ಯರ ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಇತ್ಯಾದಿ ಅಗತ್ಯ ಮಾಹಿತಿಯನ್ನು ಒಳಗೊಂಡ ದಾಖಲೆಗಳನ್ನು ನಿರ್ವಹಿಸಬೇಕು.
d) ಪ್ರತಿ ಡೆಂಗಿ ಜ್ವರ ಪ್ರಕರಣವನ್ನು, ರೋಗ ಲಕ್ಷಣಗಳು ಕಂಡು ಬಂದ ದಿನದಿಂದ, ಸದರಿಯವರ ಆರೋಗ್ಯ ಸ್ಥಿತಿಯ ಕುರಿತು 14 ದಿನಗಳು ಅನುಪಾಲನೆ ಮಾಡುವುದು ಹಾಗೂ ನಿಗದಿತ ವರದಿ ನಮೂನೆಯಲ್ಲಿ State War Room ಗೆ ವರದಿಯನ್ನು ಸಲ್ಲಿಸುವುದು. ಇಂತಹ ಡೆಂಗಿ ಪಕರಣಗಳಿಗೆ, ಸಾಧಾರಣ ಡೆಂಗಿ ಜ್ವರವು ಮಧ್ಯಮ / ತೀವು ಡೆಂಗಿ ಜ್ವರವಾಗಿ ಪರಿಣಮಿಸುವಲ್ಲಿ ಕಂಡುಬರುವ ಅಪಾಯದ ಚಿನ್ನೆಗಳ (early warning signs) ಕುರಿತು ಶಿಕ್ಷಣ ನೀಡುವುದು. Hotspot ನಿಂದ ಹೊರಗಿರುವ ಡೆಂಗಿ ಜ್ವರ ಪ್ರಕರಣಗಳಿಗೂ ಸಹ ಈ ನಿರ್ದೇಶನವನ್ನು ಅನುಪಾಲನೆ ಮಾಡುವುದು ಕಡ್ಡಾಯವಾಗಿದೆ.
6. ಡೆಂಗಿ ಜ್ವರ ಪ್ರಕರಣಗಳ ಅಗತ್ಯ ನಿರ್ವಹಣೆಗಾಗಿ ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಕನಿಷ್ಠ ತಲಾ 5 ಹಾಗೂ 8-10 ಬೆಡ್ ಗಳನ್ನು ಮೀಸಲಿಡುವುದು. ಈ ಸಂಖ್ಯೆಯ ಡೆಂಗಿ ಜ್ವರ ಪ್ರಕರಣಗಳಿಲ್ಲದಿದ್ದಲ್ಲಿ, ಸದರಿ ಬೆಡ್ ಗಳನ್ನು ಇತರೆ ರೋಗಿಗಳ ಆರೈಕೆಗ ಬಳಸುವುದು.
7. ಡೆಂಗಿ ಜ್ವರ ಪಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣೆಯ ಸೌಲಭ್ಯಗಳನ್ನು (ICU ಸೇರಿದಂತೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸಂಪೂರ್ಣ ಉಚಿತವಾಗಿ ಒದಗಿಸುವುದು (BPL & APL ವರ್ಗದವರಿಗೆ).
8. ಡೆಂಗಿ ಜ್ವರ ಪ್ರಕರಣಗಳ ಸೂಕ್ತ ನಿರ್ವಹಣೆಗಾಗಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್ ಕಿಟ್ ಗಳು, ಅಗತ್ಯ ಪಮಾಣದ ಔಷಧಿ ಹಾಗೂ IV Fluids ನ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು. ಅಗತ್ಯವಿದ್ದಲ್ಲಿ ನಿಯಮಾನುಸಾರ ಸ್ಥಳೀಯವಾಗಿ ಖರೀದಿ ಪ್ರಕ್ರಿಯೆಯನ್ನು ಪಾಲಿಸುವುದು. ಅದರಂತೆ, ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ Platelet, Fresh Frozen Plasma ಹಾಗೂ ಇತರ Component ಗಳ ದೈನಂದಿನ ಮಾಹಿತಿಯ ಲಭ್ಯತೆಯನ್ನು e-Rakt Kosh ನಲ್ಲಿ ಖಚಿತಪಡಿಸಿಕೊಳ್ಳುವುದು.
9. ಡೆಂಗಿ ಜ್ವರ ನಿರ್ವಹಣೆಯ ಸಂಬಂಧ National Guidelines on Dengue fever management (as specified in Gol 2023 guidelines) O D T I L ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು. ಮುಂದುವರೆದು, Tele ICU ಸೌಲಭ್ಯವಿದ್ದಲ್ಲಿ, ಡೆಂಗಿ ಜ್ವರ ಪಕರಣಗಳನ್ನು ಮೇಲ್ವಿಚಾರಣೆಯನ್ನು ಮಾಡುವುದು.
10. ಮೆಡಿಕಲ್ ಕಾಲೇಜುಗಳ Family Adoption Programme ಅನ್ನು ಡೆಂಗಿ ಸಮಸ್ಯಾತ್ಮಕ ಗ್ರಾಮ/ವಾರ್ಡ್ ಗಳಿಗೆ ವಿಸ್ತರಿಸುವುದು.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ, ಡೆಂಗಿ ಜ್ವರ ಪ್ರಕರಣಗಳ ನಿಯಂತ್ರಣಕ್ಕಾಗಿ ಮೇಲೆ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

BIG UPDATE: ಹೊಸ ‘BPL ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿಲ್ಲ: ‘ರಾಜ್ಯ ಆಹಾರ ಇಲಾಖೆ’ ಸ್ಪಷ್ಟನೆ | BPL Ration Card

BREAKING : ವಾಲ್ಮೀಕಿ ಹಗರಣ : ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ

Share. Facebook Twitter LinkedIn WhatsApp Email

Related Posts

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

10/05/2025 9:02 PM1 Min Read

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM1 Min Read

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM2 Mins Read
Recent News

ಇನ್ಮುಂದೆ ಕದನ ವಿರಾಮ ಉಲ್ಲಂಘನೆಯಾದರೆ ಪಾಕ್ ಗೆ ತಕ್ಕ ಪ್ರತ್ಯುತ್ತರ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

10/05/2025 11:32 PM

BREAKING: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ದೃಢಪಡಿಸಿದ ಕೇಂದ್ರ ಸರ್ಕಾರ: ಭಾರತೀಯ ಸೇನೆಗೆ ತಿರುಗೇಟಿಗೆ ಸೂಚನೆ

10/05/2025 11:27 PM

BREAKING: ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದ ಅರ್ಥವಾಗುತ್ತಿಲ್ಲ, ಶೀಘ್ರದಲ್ಲೇ ಭಾರತೀಯ ಸೇವೆ ಪ್ರತ್ಯುತ್ತರ: ಕೇಂದ್ರ ಗೃಹ ಸಚಿವಾಲಯ

10/05/2025 11:22 PM

BREAKING : ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಮತ್ತೆ ದಾಳಿ : 50ಕ್ಕೂ ಹೆಚ್ಚು ಡ್ರೋನ್ ಧ್ವಂಸಗೊಳಿಸಿದ ಭಾರತ | Watch Video

10/05/2025 9:23 PM
State News
KARNATAKA

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

By kannadanewsnow0510/05/2025 9:02 PM KARNATAKA 1 Min Read

ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದ್ದು, ಇದೀಗ ಇಂದು ಸಂಜೆ 5 ಗಂಟೆಗೆ ಭಾರತ ಮತ್ತು…

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.