Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅವೈಜ್ಞಾನಿಕ ಒಳಮೀಸಲಾತಿ ನೀತಿ ಕೈಬಿಡಲು ಆಗ್ರಹ: ಮಾ.24ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
KARNATAKA

ಅವೈಜ್ಞಾನಿಕ ಒಳಮೀಸಲಾತಿ ನೀತಿ ಕೈಬಿಡಲು ಆಗ್ರಹ: ಮಾ.24ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

By kannadanewsnow0922/03/2026 4:44 PM

ಬೆಂಗಳೂರು : ಸರ್ಕಾರದ ಒಳಮಿಸಲಾತಿ ನೀತಿ, ಆಯೋಗಗಳ ವರದಿ ಹಾಗೂ ರೋಸ್ಟರ್ ವ್ಯವಸ್ಥೆಗಳ ವಿರೋಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮಾ. 24ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ವಸಂತನಗರದ ಜಸ್ಮಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ, ಬಂಜಾರ,ಕೊರಮ,ಕೊರಚ,ಸೂಕ್ಷ್ಮ,ಅತಿಸೂಕ್ಷ್ಮ ಹಾಗೂ ಅಲೆಮಾರಿಗಳ 59 ಜಾತಿಗಳಿಗೆ ಅನ್ಯಾಯವಾಗುತ್ತಿದ್ದು, ಪರಿಶಿಷ್ಟ ಜಾತಿಗಳ ಒಳಮಿಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದೆ‌. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದ್ದು, ಸಮೀಕ್ಷೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಆಕ್ಷೇಪವನ್ನು ಹಲವಾರು ಸಂಘಟನೆಗಳು ವ್ಯಕ್ತಪಡಿಸಿದ್ದರೂ, ಅದನ್ನು ಪರಿಗಣಿಸದೆ ವರದಿ ಸಲ್ಲಿಸಲಾಗಿದೆ ಎಂದರು.

ಆಯೋಗದ ವರದಿಯಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಹಾಗೂ ಇತರ ಸೂಕ್ಷ್ಮ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಲೆಕ್ಕಿಸಿಲ್ಲ. ಉದಾಹರಣೆಗೆ, 2011ರ ಜನಗಣತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಇದ್ದ ಭೋವಿ ಸಮುದಾಯವನ್ನು ವರದಿಯಲ್ಲಿ ಅತಿ ಕಡಿಮೆ ಏರಿಕೆ ತೋರಿಸಲಾಗಿದೆ. ಇದರಿಂದ ಸಮುದಾಯಗಳ ನಿಜವಾದ ಸ್ಥಿತಿ ಪ್ರತಿಬಿಂಬಿಸಲ್ಪಟ್ಟಿಲ್ಲ.ಇನ್ನೂ ಆಯೋಗವೇ ಸಲ್ಲಿಸಿರುವ ವರದಿಯಲ್ಲಿಯೇ ಈ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀವ್ರ ಹಿಂದುಳಿದಿವೆ ಎಂದು 26 ಕೋಷ್ಟಕಗಳಲ್ಲಿ 19ರಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೂ, ಸರ್ಕಾರವು ಒಳಮಿಸಲಾತಿಯನ್ನು ರೂಪಿಸುವಾಗ ಈ ಅಂಶಗಳನ್ನು ಸೂಕ್ತವಾಗಿ ಪರಿಗಣಿಸಿಲ್ಲ ಎಂದರು.

ಸರ್ಕಾರ ರೂಪಿಸಿರುವ ಪ್ರವರ್ಗ A, B, C ವಿಭಾಗೀಕರಣವೂ ಜನಸಂಖ್ಯಾ ಅನುಪಾತಕ್ಕೆ ಅನುಗುಣವಾಗಿಲ್ಲ. ವಿಶೇಷವಾಗಿ ರೋಸ್ಟರ್ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಹಿಂದಿನ ಸರ್ಕಾರದಲ್ಲಿ 560 ಹುದ್ದೆಗಳ ನೇಮಕಾತಿಯಲ್ಲಿ ಒಂದು ಪ್ರವರ್ಗಕ್ಕೆ ಬಹುಪಾಲು ಹುದ್ದೆಗಳು ನೀಡಲಾಗಿದ್ದು, ಪ್ರವರ್ಗ Cಗೆ ಶೂನ್ಯ ಅವಕಾಶ ದೊರೆತಿದೆ. ಹೊಸ ರೋಸ್ಟರ್‌ನಲ್ಲಿ ಪ್ರವರ್ಗ Cಗೆ ಶೂನ್ಯ ಸ್ಥಾನ ನೀಡಿರುವುದರಿಂದ, ಈ ಸಮುದಾಯಗಳಿಗೆ ಅವಕಾಶ ಸಿಗುವಷ್ಟರಲ್ಲಿ ತಲೆಮಾರುಗಳು ಕಳೆದು ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಇದು ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ಹಿಂದುಳಿಸುವ ಪ್ರಯತ್ನ ಎಂದರು.

ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ 7% ಹೆಚ್ಚಿಸಿರುವುದನ್ನು ಶೆಡ್ಯೂಲ್ 9ರಲ್ಲಿ ಸೇರಿಸುವ ಮೂಲಕ ಸಂರಕ್ಷಿಸಬೇಕು. ಜೊತೆಗೆ SCP-TSP ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೇ ನೇರವಾಗಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು. ರಾಜ್ಯದಲ್ಲಿರುವ ವಿವಿಧ ಪರಿಶಿಷ್ಟ ಜಾತಿ ನಿಗಮಗಳಿಗೆ ಜನಸಂಖ್ಯಾ ಆಧಾರಿತವಾಗಿ ಮೀಸಲಾದ ಅನುದಾನವನ್ನು ನೇರವಾಗಿ ಬಿಡುಗಡೆ ಮಾಡುವ ಮೂಲಕ ಸಮುದಾಯಗಳ ಅಭಿವೃದ್ಧಿಗೆ ವೇಗ ನೀಡಬೇಕು. ಇದಲ್ಲದೆ, ಪರಿಶಿಷ್ಟ ಜಾತಿಯಲ್ಲಿ ಒಳಪಡುವ 101 ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ, ಎಲ್ಲರ ಅಭಿಪ್ರಾಯಗಳನ್ನು ಪಡೆದು ಸಮಗ್ರ ಹಾಗೂ ನ್ಯಾಯಯುತ ಒಳಮಿಸಲಾತಿ ನೀತಿಯನ್ನು ರೂಪಿಸಬೇಕು ಎಂದರು.

ಮಾ. 27ರಂದು ಒಳಮಿಸಲಾತಿ ಕುರಿತ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಸರ್ಕಾರವು ಈ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು. ಸದ್ಯ ಸರ್ಕಾರ ಭರ್ತಿ ಮಾಡಲು ಉದ್ದೇಶಿಸಿರುವ 56 ಸಾವಿರ ಹುದ್ದೆಗಳನ್ನು ಯಾವುದೇ ಒಳಮಿಸಲಾತಿ ಜಾರಿಗೊಳಿಸದೆ ಭರ್ತಿ ಮಾಡಬಾರದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾನ ಅವಕಾಶಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಈ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ. ಒಟ್ಟಾರೆ, ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳಿಗೆ ಸಮಾನ ನ್ಯಾಯ ದೊರಕಬೇಕು, ಮಲತಾಯಿ ಧೋರಣೆಗೆ ಅಂತ್ಯ ಬರಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಮಾ. 24ರಂದು ನಡೆಯಲಿರುವ ಈ ಸಮಾವೇಶ ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಗಮನ ಸೆಳೆಯುವ ಸಾಧ್ಯತೆ ಇದ್ದು, ರಾಜ್ಯದ ವಿವಿಧ ಭಾಗಗಳಿಂದ 1 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದರು.

ಮೀಸಲಾತಿ ಒಕ್ಕೂಟದ ಅಧ್ಯಕ್ಷರಾದ ಡಾ.ಹೆಚ್. ರವಿ ಮಾಕಳಿ ಮಾತನಾಡಿ, ಬೋವಿ, ಕೊರಚ, ಕೊರಮ, ಲಂಬಾಣಿ ಸೇರಿದಂತೆ ವಿವಿಧ ಜನಾಂಗಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮಾ.24 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2 ರಿಂದ 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ, ಒಳಮೀಸಲಾತಿ ಅನುಷ್ಠಾನಕ್ಕೆ ಮುನ್ನ ಸಮಗ್ರ ಪ್ರಾಯೋಗಿಕ ದತ್ತಾಂಶ ಆಧಾರಿತ ಅಧ್ಯಯನ ಅಗತ್ಯವಿದೆ.ಆದರೆ ರಾಜ್ಯ ಸರ್ಕಾರವು ಈ ಸಂಬಂಧ ಸೂಕ್ತ ಮಾಹಿತಿಯಿಲ್ಲದೆ ತ್ವರಿತ ನಿರ್ಧಾರ ಕೈಗೊಂಡಿದೆ.ಸುಪ್ರೀಂ ಕೋರ್ಟ್ ತೀರ್ಪುಗಳಲ್ಲೂ ಸಮುದಾಯಗಳ ಹಿಂದುಳಿತ್ವವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಆದರೂ ರಾಜ್ಯ ಸರ್ಕಾರ ಈ ಅಂಶಗಳನ್ನು ಪರಿಗಣಿಸದೇ A, B, C ವರ್ಗೀಕರಣ ಘೋಷಿಸಿರುವುದು ಅನ್ಯಾಯ.

ಕಾರ್ಯಾಧ್ಯಕ್ಷ ಅನಂತನಾಯಕ ಮಾತನಾಡಿ ಹಳೆಯ ಮೀಸಲಾತಿ ನಿಯಮದಂತೆ ನೇಮಕಾತಿ ಮಾಡಿಕೊಳ್ಳುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವುದು ಸ್ವಾಗತಾರ್ಹ. ಪ್ರಸ್ತುತ ಅವೈಜ್ಞಾನಿಕ ಮತ್ತು ಅನ್ಯಾಯ ಉದ್ದೇಶದಿಂದ ಕೂಡಿರುವ ರೊಸ್ಟರ್ ಆದೇಶ ಹಿಂಪಡೆಯಬೇಕು ಎಂದರು.

ಒಕ್ಕೂಟದ ಉಪಾಧ್ಯಕ್ಷ ಆದರ್ಶಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಹಾವೇರಿ ರವಿ ಪೂಜಾರ, ಕೊರಚ ಸಮುದಾಯದ ಕೃಷ್ಣಪ್ಪ , ಆನೆಕಲ್ ಚಿನ್ನಸ್ವಾಮಿ, ಶ್ರೀನಿವಾಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!

Share. Facebook Twitter LinkedIn WhatsApp Email

Related Posts

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

11/04/2026 8:25 PM2 Mins Read

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM2 Mins Read

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM2 Mins Read
Recent News

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
nitish kumar

ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಏಪ್ರಿಲ್ 13ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ; ಹೊಸ ನಾಯಕನ ಆಯ್ಕೆಗೆ ಕ್ಷಣಗಣನೆ!

11/04/2026 8:29 PM
State News
KARNATAKA

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

By kannadanewsnow0911/04/2026 8:25 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ವ್ಯಾಪ್ತಿಯಲ್ಲಿ ರಸ್ತೆ…

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM

ಪೋಷಕರೇ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

11/04/2026 4:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.