ಬೆಂಗಳೂರು : ಕರ್ನಾಟಕದ ಅಪ್ಪಟ ಬ್ರ್ಯಾಂಡ್ಗೆ ಡಿಮ್ಯಾಂಡ್ ಹೆಚ್ಚಿದೆ. ಒಂದು ವರ್ಷದಲ್ಲಿ 1,500 ಕೋಟಿ ರೂ. ಮೌಲ್ಯದ ಸೋಪುಗಳು ಮಾರಾಟವಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಎಲ್ಲೆಲ್ಲೂ ಮೈಸೂರು ಸ್ಯಾಂಡಲ್ ಸೋಪ್ ಘಮಘಮಿಸುತ್ತಿದೆ. ಕರ್ನಾಟಕದ ಅಪ್ಪಟ ಬ್ರ್ಯಾಂಡ್ಗೆ ಡಿಮ್ಯಾಂಡ್ ಹೆಚ್ಚಿದೆ. ಒಂದು ವರ್ಷದಲ್ಲಿ 1,500 ಕೋಟಿ ರೂ. ಮೌಲ್ಯದ ಸೋಪುಗಳು ಮಾರಾಟವಾಗಿದ್ದು, 40 ವರ್ಷಗಳಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಕರ್ನಾಟಕದ ಹೆಮ್ಮೆಯ ಘಮಲು ಈಗ ಜಗದಗಲ ಹರಡುತ್ತಿದೆ.