ಉತ್ತರ ಪ್ರದೇಶ: ದೆಹಲಿ ರೈಲು ನಿಲ್ದಾಣದಲ್ಲಿ ಉಂಟಾದಂತ ಕಾಲ್ತುಳಿತದ ನಂತ್ರ ರೈಲ್ವೆ ಸಚಿವಾಲಯ ಎಚ್ಚೆತ್ತುಕೊಂಡಿದೆ. ಮತ್ತೆಲ್ಲೂ ಈ ದುರಂತ ಮರುಕಳಿಸದಂತೆ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಎಮರ್ಜೆನ್ಸಿ ಜಾರಿಗೊಳಿಸಿದೆ.
ಈ ಸಂಬಂಧ ರೈಲ್ವೆ ಇಲಾಖೆಯಿಂದ ಪ್ರಯಾಗ್ ರಾಜ್ ನಿಲ್ದಾಣದಲ್ಲಿ ಎಮರ್ಜೆನ್ಸಿ ಜಾರಿಗೊಳಿಸಿ ಆದೇಶಿಸಿದೆ. ಆದೇಶದಲ್ಲಿ ಜನಸಂದಣಿ ಆಗದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಜನರು ಸೇರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬುದಾಗಿ ಸೂಚಿಸಿದೆ.
ಇನ್ನೂ ಸಾಧ್ಯವಾದಷ್ಟು ವಿಶೇಷ ರೈಲು ಓಡಿಸಲು ಸೂಚಿಸಿರುವಂತ ಇಲಾಖೆ ಫೆಬ್ರವರಿ.28ರವರೆಗೆ ಈ ನಿಯಮ ಪಾಲಿಸುವಂತೆ ಖಡಕ್ ಆದೇಶ ಮಾಡಿದೆ. ಈ ಮೂಲಕ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಣಕ್ಕೆ ಮಹತ್ವದ ಕ್ರಮ ವಹಿಸಿದೆ.