ನವದೆಹಲಿ: ವೈದ್ಯರೊಂದಿಗೆ ಖಾಸಗಿ ಸಮಾಲೋಚನೆ ನಡೆಸಬೇಕೆಂಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ತಿಹಾರ್ ಜೈಲಿಗೆ ಸೂಚಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶೆ ಕಾವೇರಿ ಬವೇಜಾ ಈ ತೀರ್ಪು ನೀಡಿದ್ದಾರೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ರಚಿಸಿದ ವೈದ್ಯಕೀಯ ಮಂಡಳಿಯು ಇನ್ಸುಲಿನ್ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ರೂಸ್ ಅವೆನ್ಯೂ ನ್ಯಾಯಾಲಯ ಹೇಳಿದೆ.
“ವೈದ್ಯಕೀಯ ಮಂಡಳಿಯು ಆಹಾರ ಮತ್ತು ವ್ಯಾಯಾಮ ಯೋಜನೆಯನ್ನು ಸಹ ಸೂಚಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೂ ಮುನ್ನ ಭಾನುವಾರ, ತಿಹಾರ್ ಆಡಳಿತವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಏಮ್ಸ್ನ ಹಿರಿಯ ತಜ್ಞರೊಂದಿಗೆ ವಿಡಿಯೋ ಕಾನ್ಫರೆನ್ಸ್ ಆಯೋಜಿಸಿತ್ತು. ಈ ಸಮಯದಲ್ಲಿ “ಇನ್ಸುಲಿನ್ ವಿಷಯವನ್ನು ಕೇಜ್ರಿವಾಲ್ ಎತ್ತಲಿಲ್ಲ ಅಥವಾ ವೈದ್ಯರು ಸೂಚಿಸಲಿಲ್ಲ” ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನೀಡಲು ತಿಹಾರ್ ಆಡಳಿತ ನಿರಾಕರಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಅವರನ್ನು ಕೊಲ್ಲಲು ಪಿತೂರಿ ನಡೆಸಲಾಗಿದೆ ಎಂದು ಗಂಭೀರ ಆರೋಪವನ್ನು ಎಎಪಿ ಪಕ್ಷ ಮಾಡಿತ್ತು. ಈ ಬೆನ್ನಲ್ಲೇ ಈಗ ವೈದ್ಯರ ದೈನಂದಿನ ಸಮಾಲೋಚನೆಗಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮನವಿ ದೆಹಲಿ ಕೋರ್ಟ್ ತಿರಸ್ಕರಿಸಿದೆ.
Fake post alert: ಇದು ‘ಹಾಲಿನ ಗುಣಮಟ್ಟ’ವನ್ನು ಪ್ರಶ್ನಿಸುವ ವೈರಲ್ ವೀಡಿಯೊಗೆ ‘ಅಮುಲ್’ ಪ್ರತಿಕ್ರಿಯೆ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ