ನವದೆಹಲಿ: ಇಡಿ ಬಂಧನ ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಿದ್ದಂತ ದೆಹಲಿ ಹೈಕೋರ್ಟ್, ಕೇಜ್ರಿವಾಲ್ ಹಗರಣದಲ್ಲಿ ಭಾಗಿಯಾಗಿ್ದದಾರೆ. ಇಂದು ತನ್ನ ತೀರ್ಪು ಪ್ರಕಟಿಸಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ದೆಹಲಿ ಮದ್ಯ ನೀತಿ ಪರಿಷ್ಕರಣೆ ಹಗರಣದಲ್ಲಿ ಇಡಿಯಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧಿಸಲಾಗಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಹಾಜರುವಡಿಸಿತ್ತು. ಅವರಿಗೆ ನ್ಯಾಯಾಂಗ ಬಂಧನ ಕೂಡ ವಿಧಿಸಲಾಗಿದ್ದು, ತಿಹಾರ್ ಜೈಲಿನಲ್ಲಿ ಇರುವಂತೆ ಆಗಿದೆ.
ಇಂತಹ ಪ್ರಕರಣ ಸಂಬಂಧ ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ದೆಹಲಿ ಹೈಕೋರ್ಟ್, ತೀರ್ಪು ಕಾಯ್ದಿರಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಸ್ವರ್ಣಕಾಂತ ಅವರನ್ನ ಒಳಗೊಂಡ ನ್ಯಾಯಪೀಠವು, ಅವರು ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವಂತ ಅರ್ಜಿಯು ಜಾಮೀನಿನ ಬಗ್ಗೆ ಅಲ್ಲ. ಬೇಲ್ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಆಗಿದೆ. ಇಡಿಗೆ ಆ ರೀತಿಯ ಯಾವುದೇ ಅಧಿಕಾರವಿಲ್ಲ ಎಂಬುದಾಗಿ ಹೇಳಿತು.
ಅರವಿಂದ್ ಕೇಜ್ರಿವಾಲ್ ಇತರರೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಇಡಿ ಸಂಗ್ರಹಿಸಿದ ದಾಖಲೆಗಳು ಬಹಿರಂಗಪಡಿಸಿವೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮತ್ತು ಎಎಪಿಯ ಸಂಚಾಲಕರಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಪ್ರಕರಣ ಬಹಿರಂಗಪಡಿಸಿದೆ. ಅಪ್ರೂವರ್ಗೆ ಕ್ಷಮಾದಾನ ನೀಡುವುದು ಇಡಿಯ ವ್ಯಾಪ್ತಿಯಲ್ಲಿಲ್ಲ. ಇದು ನ್ಯಾಯಾಂಗ ಪ್ರಕ್ರಿಯೆಯಾಗಿದೆ. ಕ್ಷಮಾದಾನದ ಪ್ರಕ್ರಿಯೆಯ ಬಗ್ಗೆ ನೀವು ಅನುಮಾನ ವ್ಯಕ್ತಪಡಿಸಿದರೆ… ನೀವು ನ್ಯಾಯಾಧೀಶರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದೀರಿ ಎಂದು ನ್ಯಾಯಾಲಯ ಹೇಳಿದೆ.
ಕೇಜ್ರಿವಾಲ್ ಅವರನ್ನು ವಿಸಿ ಮೂಲಕ ಪ್ರಶ್ನಿಸಬಹುದಿತ್ತು ಎಂಬ ವಾದವನ್ನು ತಿರಸ್ಕರಿಸಬೇಕು. ತನಿಖೆಯನ್ನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಆರೋಪಿಗೆ ಬಿಟ್ಟ ವಿಚಾರವಲ್ಲ. ಇದು ಆರೋಪಿಯ ಅನುಕೂಲಕ್ಕೆ ಅನುಗುಣವಾಗಿರಲು ಸಾಧ್ಯವಿಲ್ಲ. ಈ ನ್ಯಾಯಾಲಯವು ಎರಡು ರೀತಿಯ ಕಾನೂನುಗಳನ್ನು ಹೊಂದಿಸುವುದಿಲ್ಲ – ಒಂದು ಸಾಮಾನ್ಯರಿಗೆ ಮತ್ತು ಇನ್ನೊಂದು ಸಾರ್ವಜನಿಕ ಸೇವಕರಿಗೆ ಎಂದು ತಿಳಿಸಿತು.
ಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಯಾವುದೇ ನಿರ್ದಿಷ್ಟ ಸವಲತ್ತು ಇರಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತು.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಮತ್ತು ಚುನಾವಣೆಯ ಸಮಯವನ್ನು ಲೆಕ್ಕಿಸದೆ ನ್ಯಾಯಾಲಯವು ಕಾನೂನಿನ ಪ್ರಕಾರ ಅವರ ಬಂಧನ ಮತ್ತು ರಿಮಾಂಡ್ ಅನ್ನು ಪರಿಶೀಲಿಸಬೇಕಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಈ ನ್ಯಾಯಾಲಯದ ಮುಂದಿರುವ ವಿಷಯವು ರಾಜಕೀಯ ಪಕ್ಷಗಳ ಸಮಸ್ಯೆಗಳನ್ನು ಪರಿಗಣಿಸುವುದಿಲ್ಲ, ಆದರೆ ತನಿಖಾ ಸಂಸ್ಥೆಯ ಸಮಸ್ಯೆಗಳನ್ನು ಪರಿಗಣಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ನ್ಯಾಯಾಲಯವು ನಿಷ್ಪಕ್ಷಪಾತವಾಗಿರಬೇಕು ಮತ್ತು ಕಾನೂನಿಗೆ ಅನುಗುಣವಾಗಿ ಪ್ರಕರಣವನ್ನು ನಿರ್ಧರಿಸಬೇಕು. ಅರವಿಂದ್ ಕೇಜ್ರಿವಾಲ್ ಪಿತೂರಿ ನಡೆಸಿ ಅಪರಾಧದ ಆದಾಯವನ್ನು ಬಳಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿತು.
ಒಟ್ಟಾರೆಯಾಗಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಮತ್ತು ರಿಮಾಂಡ್ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಇಡಿ ಬಂಧನ ಪ್ರಶ್ನಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿದೆ.
Delhi High Court dismisses CM Arvind Kejriwal's plea challenging his arrest by the Enforcement Directorate in the Excise Policy money laundering case.
ED was in possession of enough material which had led them to arrest Kejriwal. Non-joining of investigation by Kejriwal, delay… pic.twitter.com/i07wwSlJiE
— ANI (@ANI) April 9, 2024
ಶೋಭಾ ಕರಂದ್ಲಾಜೆಯವರಲ್ಲಿ ಮಾನವೀಯತೆಯ ಲವಲೇಶವೂ ಇಲ್ಲ- ಕಾಂಗ್ರೆಸ್ ಕಿಡಿ
`ವಾಟ್ಸಪ್’ ಬಳಕೆದಾರರೇ ಎಚ್ಚರ : ಈ 3 ಸಂದೇಶಗಳ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣವೇ ಖಾಲಿ!