ನವದೆಹಲಿ : ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ರಾತ್ರಿ ಇಡಿಯಿಂದ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಇಂದು ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಅಂದ್ಹಾಗೆ, ದೆಹಲಿ ಮುಖ್ಯಮಂತ್ರಿಯನ್ನ ಮದ್ಯ ನೀತಿ ಹಗರಣದ ಕಿನ್ ಪಿನ್ ಎಂದಿರುವ ಇಡಿ, 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು 10 ದಿನಗಳ ಕಾಲ ಇಡಿ ಕಸ್ಟಡಿಗೆ ಕೋರಿದರು. “ನಾವು ಪಿಎಂಎಲ್ಎ (ಅಥವಾ ಮನಿ ಲಾಂಡರಿಂಗ್ ತಡೆ ಕಾಯ್ದೆ) ಸೆಕ್ಷನ್ 19 ಅನ್ನು ಅನುಸರಿಸಿದ್ದೇವೆ. ಸಂಬಂಧಿಕರಿಗೆ ಮಾಹಿತಿ ನೀಡಲಾಗುತ್ತದೆ ಮತ್ತು ರಿಮಾಂಡ್ ಅರ್ಜಿಯ ಪ್ರತಿಯನ್ನ ನೀಡಲಾಗುತ್ತದೆ. ಬಂಧನದ ಕಾರಣಗಳನ್ನ ಲಿಖಿತವಾಗಿ ಒದಗಿಸಲಾಗಿದೆ” ಎಂದು ಅವರು ಹೇಳಿದರು.
ಕೇಜ್ರಿವಾಲ್ ಅವರು ಹಗರಣದ ಕಿಂಗ್ ಪಿನ್ ಎಂದು ರಾಜು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. “ಅವರು ನೀತಿಯ ಅನುಷ್ಠಾನದಲ್ಲಿ ನೇರವಾಗಿ ಭಾಗಿಯಾಗಿದ್ದರು ಮತ್ತು ದಕ್ಷಿಣ ಗುಂಪಿಗೆ ಅನುಕೂಲ ಮಾಡಿಕೊಟ್ಟರು” ಎಂದಿದ್ದಾರೆ.
Pm Kisan : ‘ಪಿಎಂ ಕಿಸಾನ್’ ಮೇಲೆ ಲೋಕಸಭೆ ಚುನಾವಣೆ ಎಫೆಕ್ಟ್ : 17ನೇ ಕಂತಿನ ‘ಹಣ’ ಬಿಡುಗಡೆ ಮತ್ತಷ್ಟು ವಿಳಂಬ!
‘SSLC ಎಕ್ಸಾಂ’ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ‘ಬಿಸಿಯೂಟ’ ನೀಡಲು ‘ರಾಜ್ಯ ಸರ್ಕಾರ’ ಸೂಚನೆ
ಲೋಕಸಭಾ ಚುನಾವಣೆ : ದೇಶಾದ್ಯಂತ ಮನೆ ಯಜಮಾನಿಗೆ 3,000 ರೂಪಾಯಿ ಭರವಸೆ ನೀಡಿದ ‘AIADMK’