ಶಿವಮೊಗ್ಗ: ಕೆಪಿಟಿಸಿಎಲ್ ಇಂಜಿನಿಯರ್ ಶಾಂತ ಕುಮಾರಸ್ವಾಮಿ ಯಾರು ಎಂಬುದೇ ಗೊತ್ತಿಲ್ಲ. ಆತ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೂ ಇಲ್ಲ. ನಾನು ಹಣಕ್ಕೂ ಬೇಡಿಕೆ ಇಟ್ಟಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳ ಮುಂದೆ ನಾನು ಹಣ ಪೀಕಲು ಪ್ರಯತ್ನಿಸಿರುವುದಾಗಿ ಆರೋಪಿಸಿದ್ದಾರೆ. ಅಂತಹ ಕೆಪಿಟಿಸಿಎಲ್ ಇಂಜಿನಿಯರ್ ಶಾಂತಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ನಲ್ಲಿ ಇಂಜಿನಿಯರ್ ‘ಶಾಂತಕುಮಾರ ಸ್ವಾಮಿ’ಗೆ ಬೆದರಿಕೆ, ಸುಳ್ಳು ಕೇಸ್ ಆರೋಪ: ಸಾಗರ ಶಾಸಕ, DYSP ಹೇಳಿದ್ದೇನು? ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಸುದ್ದಿಯ ಬಳಿಕ ಪ್ರತಿಕ್ರಿಯಿಸಿರುವಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ನಾನು ಶಾಂತ ಕುಮಾರಸ್ವಾಮಿಯನ್ನು ನೋಡಿಯೇ ಇಲ್ಲ. ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೂ ಅವರು ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಆನಂದಪುರದಲ್ಲಿ ಇಂಜಿನಿಯರ್ ಆಗಿದ್ದಾರೆ ಎನ್ನಲಾಗುತ್ತಿತ್ತು. ಆದರೇ ಆ ರೀತಿಯ ಹೆಸರಿನ ಯಾರು ಅಲ್ಲಿ ಇಲ್ಲ. ತಾಳಗುಪ್ಪ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಆಗಿದ್ದರು ಎಂಬುದಾಗಿ ಮಾಹಿತಿಯಿದೆ. ತಾಳಗುಪ್ಪ ಸೊರಬ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ನಾನು ಆತನೊಂದಿಗೆ ಈವರೆಗೊ ಮಾತನಾಡಿಲ್ಲ, ನನ್ನನ್ನು ಶಾಂತಕುಮಾರಸ್ವಾಮಿ ಭೇಟಿಯೂ ಆಗಿಲ್ಲ. ಹೀಗಿರುವಾಗ ಈ ಆರೋಪವೆಲ್ಲ ಸತ್ಯಕ್ಕೆ ದೂರವಾಗಿರೋದು. ಸುಳ್ಳಿನಿಂದ ಕೂಡಿದ್ದಾಗಿದೆ ಎಂಬುದಾಗಿ ತಿಳಿಸಿದರು.
ಸಾಗರ ಕ್ಷೇತ್ರದ ಜನಪ್ರತಿನಿಧಿಯಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ಅದು ಬಿಟ್ಟು ಹಣಕ್ಕೆ ಬೇಡಿಕೆಯ ಆರೋಪ ನಿರಾಧಾರ. ನನ್ನ ಬಗ್ಗೆ ಕೆಪಿಟಿಸಿಎಲ್ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಮಾಡಿರುವಂತ ಆರೋಪ ಸುಳ್ಳು. ಸುಖಾ ಸುಮ್ಮನೇ ಇಂತಹ ಆರೋಪ ಮಾಡಿರುವಂತ ಅವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING : ದೇಶದಿಂದ ಪರಾರಿಯಾಗಲು ಯತ್ನಿಸಿದ್ದ ಬಾಂಗ್ಲಾದೇಶದ ಮಾಜಿ ‘ಐಟಿ ಸಚಿವ’ ಅರೆಸ್ಟ್
BREAKING : ಯುಎಸ್ ಉಪಾಧ್ಯಕ್ಷ ಅಭ್ಯರ್ಥಿಯಾಗಿ ‘ಟಿಮ್ ವಾಲ್ಜ್’ ಆಯ್ಕೆ ಮಾಡಿದ ‘ಕಮಲಾ ಹ್ಯಾರಿಸ್’