ನವದೆಹಲಿ: ವೇದಾಂತ ಗ್ರೂಪ್ ಮುಖ್ಯಸ್ಥ ಅನಿಲ್ ಅಗರ್ವಾಲ್ ಅವರ ಹಿರಿಯ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ಸೂಚಿಸಿದ್ದಾರೆ
ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ, ಇದು “ತೀವ್ರ ಆಘಾತಕಾರಿ ಮತ್ತು ದುಃಖಕರ” ಎಂದರು.
ಅನಿಲ್ ಅಗರ್ವಾಲ್ ಅವರು ತಮ್ಮ ಮಗನ ಸಾವನ್ನು ಘೋಷಿಸಿದ ಪೋಸ್ಟ್ಗೆ ಪ್ರಧಾನಿ ಪ್ರತಿಕ್ರಿಯಿಸಿದ್ದು, ಇದು ಅವರ ಜೀವನದ “ಕರಾಳ” ದಿನ ಎಂದು ಬಣ್ಣಿಸಿದ್ದಾರೆ. 49 ವರ್ಷದ ಅಗ್ನಿವೇಶ್ ಬುಧವಾರ ಹೃದಯಾಘಾತದಿಂದ ನಿಧನರಾದರು.
“ಶ್ರೀ ಅಗ್ನಿವೇಶ್ ಅಗರ್ವಾಲ್ ಅವರ ಅಕಾಲಿಕ ನಿಧನವು ತೀವ್ರ ಆಘಾತಕಾರಿ ಮತ್ತು ದುಃಖ ತಂದಿದೆ. ಈ ಹೃದಯಸ್ಪರ್ಶಿ ಶ್ರದ್ಧಾಂಜಲಿಯಲ್ಲಿ ನಿಮ್ಮ ದುಃಖದ ಆಳ ಸ್ಪಷ್ಟವಾಗಿದೆ” ಎಂದು ಪ್ರಧಾನಿ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ








