ಬೆಂಗಳೂರು: ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡೋದಿಲ್ಲ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಈ ನಡುವೆಯೂ ಕಾಂಗ್ರೆಸ್ ಸರ್ಕಾರವಿರೋ ಹಿಮಾಚಲ ಪ್ರದೇಶದಲ್ಲೇ ರಜೆ ಕೊಟ್ಟಿದ್ದಾರೆ. ನೀವ್ಯಾಕೆ ಕೊಡ್ತಾ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿಎಂ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಮಾಡಿರುವಂತ ಅವರು, ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ, ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ ಎಂದಿದ್ದಾರೆ.
ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ ನಿಂದನೆಗಳ ಪರಿಣಾಮ ಈಗಾಗಲೇ ಕಳಂಕದ ಭಾರ ನಿಮ್ಮ ಹೆಗಲೇರಿದೆ. ಈಗಲೂ ಕಾಲಮಿಂಚಿಲ್ಲ ನಿಮ್ಮ ಮೈಸೂರಿನಿಂದಲೇ ಬಾಲ ರಾಮ ಅಯೋಧ್ಯೆಗೆ ತೆರಳಿದ್ದಾನೆ ಶತಕೋಟಿ ಜನರ ಹೃದಯಗಳ ನಾಳೆ ಆವರಿಸಿಕೊಳ್ಳಲಿದ್ದಾನೆ ಎಂದು ತಿಳಿಸಿದ್ದಾರೆ.
ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡು ದಿನವಿಡೀ ರಾಮ ಸ್ಮರಣೆ ಮಾಡಲು ಹಂಬಲಿಸುತ್ತಿರುವ ಜನರ ಭಾವನೆಗಳನ್ನು ಗೌರವಿಸಲು ನಾಳೆ ರಜೆ ಘೋಷಿಸಿ ಬಿಡಿ, ಅಪವಾದದಿಂದ ದೂರವಿರಿ ಎಂಬುದಾಗಿ ಸಲಹೆ ಮಾಡಿದ್ದಾರೆ.
ಮಾನ್ಯ ಮುಖ್ಯಮಂತ್ರಿ @siddaramaiah ಅವರೇ,
ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ.ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ… pic.twitter.com/Qyut9sRUgd
— Vijayendra Yediyurappa (@BYVijayendra) January 21, 2024
Covid19 Update: ರಾಜ್ಯದಲ್ಲಿಂದು 89 ಜನರಿಗೆ ಕೊರೋನಾ, 74 ಸೋಂಕಿತರು ಗುಣಮುಖ
Jai Shri Ram On Ambani House : ‘ಅಂಬಾನಿ ಮನೆ’ ಮೇಲೆ ರಾರಾಜಿಸಿದ ‘ಜೈ ಶ್ರೀ ರಾಮ್ ಬರಹ