ಬೆಂಗಳೂರು: ವಿಶ್ವದಾಧ್ಯಂತ ಎಐ ತಂತ್ರಜ್ಞಾನ ಮುಂಚೂಣಿಯಲ್ಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎಐ ಕೌಶಲ ಮಂಡಳಿ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.
ಬೆಂಗಳೂರು ಮತ್ತು ಬೆಂಗಳೂರಿನ ಹೊರವಲಯದಲ್ಲಿ ಮೂರು ಹೊಸ ಟೆಕ್ ಪಾರ್ಕ್ ಸ್ಥಾಪಿಸುವ ಮೂಲಕ ಜಾಗತಿಕ ನಾವೀನ್ಯ ಜಿಲ್ಲೆಗಳ ರಚನೆಗೆ ನಿರ್ಧರಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ₹100 ಕೋಟಿ ಆವಿಷ್ಕಾರ ನಿಧಿ ಸ್ಥಾಪಿಸಲಾಗುವುದು. ಕೃತಕ ಬುದ್ಧಿಮತ್ತೆಗೆ ಉತ್ತೇಜನ ನೀಡಲು ಉತ್ಕೃಷ್ಟತಾ ಕೇಂದ್ರ ಮತ್ತು ಎಐ ಕೌಶಲ ಮಂಡಳಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಬೆಂಗಳೂರಿನ ಹೊರವಲಯದಲ್ಲಿ ಮೂರು ಹೊಸ ಟೆಕ್ ಪಾರ್ಕ್ ಸ್ಥಾಪಿಸುವ ಮೂಲಕ ಜಾಗತಿಕ ನಾವೀನ್ಯ ಜಿಲ್ಲೆಗಳ ರಚನೆಗೆ ನಿರ್ಧರಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ₹100 ಕೋಟಿ ಆವಿಷ್ಕಾರ ನಿಧಿ ಸ್ಥಾಪಿಸಲಾಗುವುದು. ಕೃತಕ ಬುದ್ಧಿಮತ್ತೆಗೆ ಉತ್ತೇಜನ ನೀಡಲು ಉತ್ಕೃಷ್ಟತಾ ಕೇಂದ್ರ… pic.twitter.com/IN1StJsVd6
— DIPR Karnataka (@KarnatakaVarthe) September 28, 2024
ರಾಜ್ಯದ ಯುವಕ ಯುವತಿಯರು ಕಾಲೇಜುಗಳಲ್ಲಿ ತಾಂತ್ರಿಕ ಶಿಕ್ಷಣಾರ್ಹತೆ ಪಡೆದ ನಂತರ, ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹಾಗೂ ವಿಭಿನ್ನ ಉದ್ಯೋಗ ಸಂಸ್ಥೆಗಳಲ್ಲಿ ವಿಭಿನ್ನವಾದ ನಿಪುಣತೆಯನ್ನು ಹೊಂದಿರುವ ಉದ್ಯೋಗಿಗಳ ಬೇಡಿಕೆಯಿರುವುದರಿಂದ ಕರ್ನಾಟಕ ಸರ್ಕಾರ ‘ನಿಪುಣ ಕರ್ನಾಟಕ’ ಯೋಜನೆಯನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಮೂಲಕ ನಾವು ರಾಜ್ಯದ ಯುವ ಸಮೂಹಕ್ಕೆ ಸೂಕ್ತ ತರಬೇತಿ ನೀಡಿ ಅವರನ್ನು ಅವಶ್ಯಕತೆಗೆ ಅನುಗುಣವಾದ ಉದ್ಯೋಗಗಳಿಗೆ ತಯಾರು ಮಾಡಲಾಗುತ್ತಿದೆ, ಇಂತಹ ನಿಪುಣರಿಗೆ ಸೂಕ್ತ ಉದ್ಯೋಗ ಸೃಷ್ಟಿಸಿಕೊಡಲು ಸ್ಕಿಲ್ ಕಾರಿಡಾರ್ ಆರಂಭಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಯಭಾರಿ ಎರಿಕ್ ಗಾರ್ಸೆಟಿ ಅವರಿಗೆ ಸಲಹೆ ನೀಡಿದರು.
ಕರ್ನಾಟಕದಲ್ಲಿ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸೂಕ್ತ ವಾತಾವರಣವಿದೆ ಶಿಕ್ಷಣಾರ್ಹತೆ, ಕೌಶಲ್ಯ, ತರಬೇತಿ ಹೊಂದಿದ ಯುವ ಸಮೂಹ ಕರ್ನಾಟಕದಲ್ಲಿದೆ, ಸಂಪರ್ಕ, ಮೂಲಭೂತ ಅವಶ್ಯಕತೆಗಳು ದೊರೆಯಲಿದೆಯಾದ್ದರಿಂದ ಕರ್ನಾಟಕದಲ್ಲಿ ಯುಎಸ್ ಹೂಡಿಕೆದಾರರು ಬಂಡವಾಳ ಹೂಡಲು ಆಹ್ವಾನ ನೀಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ರಾಯಭಾರಿ ಎರಿಕ್ ಗಾರ್ಸೆಟಿ ಅವರಿಗೆ ತಿಳಿಸಿ, ಈ ಸಂಬಂಧದಲ್ಲಿ ತಮ್ಮ ಸರ್ಕಾರ ಶೀಘ್ರದಲ್ಲಿ ಜಿ.ಇ.ಸಿ ಪಾಲಿಸಿ ಪ್ರಕಟಿಸಲಿದೆ ಎಂದೂ ಹೇಳಿದರು.
ದಾಖಲೆ ಬಿಡುಗಡೆ ಮಾಡಬೇಡಿ ಎಂದು ಕುಮಾರಸ್ವಾಮಿ ಹಿಡಿದುಕೊಂಡವರು ಯಾರು? ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು
ಆ ತಾಯಿ ಎಂದೂ ಹೊರಬಂದವರಲ್ಲ, ಅವರು ಮುಗ್ದರು : ಸಿಎಂ ಪತ್ನಿ ಪಾರ್ವತಿ ಕುರಿತು ಕೆಎಸ್ ಈಶ್ವರಪ್ಪ ಹೇಳಿದ್ದೇನು?