ನವದೆಹಲಿ : ರಿಸರ್ವ್ ಬ್ಯಾಂಕ್ ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪ್ರತಿದಿನ ಬ್ಯಾಂಕಿಗೆ ಹೋಗಿ ವಹಿವಾಟು ನಡೆಸುವವರಿಗೆ, ಬ್ಯಾಂಕ್ ಗಳಿಗೆ ಯಾವ ದಿನಗಳಲ್ಲಿ ರಜೆ ಇದೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ.
ಮುಂಬರುವ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಬಹಳಷ್ಟು ರಜೆ ಇರುತ್ತದೆ. ಆರ್ ಬಿಐ ಕ್ಯಾಲೆಂಡರ್ ಪ್ರಕಾರ.. ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ಗಳಿಗೆ ಒಟ್ಟು 18 ಬ್ಯಾಂಕ್ ರಜಾದಿನಗಳಿವೆ. ಇದರಲ್ಲಿ ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳು ಸೇರಿವೆ. ಈ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಗೆ ಸಾಮಾನ್ಯ ರಜೆ ಇರುತ್ತದೆ. ಇತರ ದಿನಗಳಲ್ಲಿ ವಿವಿಧ ಪ್ರಾದೇಶಿಕ ರಜಾದಿನಗಳೂ ಇವೆ. ಆದಾಗ್ಯೂ, ಈ ಬ್ಯಾಂಕ್ ರಜಾದಿನಗಳು ಎಲ್ಲಾ ರಾಜ್ಯಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಿ. ಅವು ಆಯಾ ರಾಜ್ಯಗಳ ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳನ್ನು ಅವಲಂಬಿಸಿರುತ್ತದೆ.
ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ:
ಡಿಸೆಂಬರ್ 1, ಸೋಮವಾರ: ರಾಜ್ಯತ್ವ ದಿನ (ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ನಲ್ಲಿ ರಜಾದಿನ)
ಡಿಸೆಂಬರ್ 3, ಬುಧವಾರ: ಸೇಂಟ್ ಕ್ಸೇವಿಯರ್ ಉತ್ಸವ (ಗೋವಾದಲ್ಲಿ ರಜಾದಿನ)
ಡಿಸೆಂಬರ್ 7: ಭಾನುವಾರ ರಜೆ
ಡಿಸೆಂಬರ್ 12, ಶುಕ್ರವಾರ: ಪಾ ಟೋಗನ್ ನೆಂಗ್ಜಿಂಜ ಸಂಗ್ಮಾ ಪುಣ್ಯತಿಥಿ (ಮೇಘಾಲಯದಲ್ಲಿ ರಜಾದಿನ)
ಡಿಸೆಂಬರ್ 13: ಎರಡನೇ ಶನಿವಾರ ರಜೆ
ಡಿಸೆಂಬರ್ 14: ಭಾನುವಾರ ರಜೆ
ಡಿಸೆಂಬರ್ 18, ಗುರುವಾರ: ಉಸೋಸೊ ಥಾಮ್ ಪುಣ್ಯತಿಥಿ (ಮೇಘಾಲಯದಲ್ಲಿ ರಜಾದಿನ)
ಡಿಸೆಂಬರ್ 19, ಶುಕ್ರವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜಾದಿನ)
ಡಿಸೆಂಬರ್ 20, ಶನಿವಾರ: ಲುಸೂಂಗ್, ನಮ್ಸೂಂಗ್ ಉತ್ಸವ (ಸಿಕ್ಕಿಂನಲ್ಲಿ ರಜಾದಿನ)
ಡಿಸೆಂಬರ್ 21: ಭಾನುವಾರ ರಜೆ
ಡಿಸೆಂಬರ್ 22, ಸೋಮವಾರ: ಲುಸೂಂಗ್, ನಮ್ಸೂಂಗ್ ಉತ್ಸವ (ಸಿಕ್ಕಿಂನಲ್ಲಿ ರಜಾದಿನ)
ಡಿಸೆಂಬರ್ 24, ಬುಧವಾರ: ಕ್ರಿಸ್‌ಮಸ್ ಈವ್ (ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯದಲ್ಲಿ ರಜಾದಿನ)
25, ಗುರುವಾರ: ಕ್ರಿಸ್‌ಮಸ್, ಎಲ್ಲಾ ಪ್ರದೇಶಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿವೆ
26, ಶುಕ್ರವಾರ: ಕ್ರಿಸ್‌ಮಸ್ (ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯದಲ್ಲಿ ರಜಾದಿನ)
27, ನಾಲ್ಕನೇ ಶನಿವಾರ ರಜಾದಿನ
28, ಭಾನುವಾರ ರಜಾದಿನ
30, ಮಂಗಳವಾರ: ಯು ಕಿಯಾಂಗ್ ನಂಗ್ಬಾ ಪುಣ್ಯ ತಿಥಿ (ಮೇಘಾಲಯದಲ್ಲಿ ರಜಾದಿನ)
31, ಬುಧವಾರ: ಹೊಸ ವರ್ಷದ ಮುನ್ನಾದಿನ (ಮಿಜೋರಾಂ, ಮಣಿಪುರದಲ್ಲಿ ರಜಾದಿನ)
ರಜಾ ದಿನಗಳಲ್ಲಿ ಬ್ಯಾಂಕ್ ಕಚೇರಿಗಳು ಮುಚ್ಚಲ್ಪಟ್ಟಿದ್ದರೂ, ಆನ್‌ಲೈನ್ ಬ್ಯಾಂಕಿಂಗ್ ಲಭ್ಯವಿದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಿರ್ವಹಿಸಲು ಜನರು ನೆಟ್ ಬ್ಯಾಂಕಿಂಗ್ ಅನ್ನು ಬಳಸಬಹುದು. ನಗದು ಅಗತ್ಯವಿರುವವರಿಗೆ ಎಟಿಎಂಗಳು ತೆರೆದಿರುತ್ತವೆ.








