ಕೋಲಾರ: ವಿವಾಹಿತೆಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿದ್ದಲ್ಲದೇ, ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದಂತ ಪ್ರಿಯಕರನ ಮನೆ ಮುಂದೆ ಮಹಿಳೆ ಧರಣಿ ನಡೆಸುತ್ತಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಿಯಕರ ಅಮರನಾಥ್ ಮನೆ ಎದುರು ಧರಣಿಯನ್ನು ಮಹಿಳೆ ನಡೆಸುತ್ತಿದ್ದಾರೆ. ಅಮರನಾಥ್ ಮನೆಯ ಎದುರು ಮಹಿಳೆ ಸಂಯುಕ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಪತಿ ಹರೀಶ್ ಸ್ನೇಹಿತ ಅಮರನಾಥ್ ನನ್ನು ಪ್ರೀತಿಸಿದ್ದ ಸಂಯುಕ್ತಾ.
ಬೆಂಗಳೂರಲ್ಲಿ ಪತಿಯ ಹರೀಶ್ ಸ್ನೇಹಿತ ಅಮರನಾಥ್ ಜೊತೆಗೆ ಸಂಯುಕ್ತಾ ಪ್ರೀತಿ ಪ್ರೇಮದಲ್ಲಿ ಬಿದ್ದಿದ್ದರು. 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಮರನಾಥ್ ಗಾಗಿ ಪತಿ ಹರೀಶ್ ನನ್ನೇ ಸಂಯುಕ್ತಾ ತೊರೆದು ಬಂದಿದ್ದರು.
ಸಂಯುಕ್ತಾ 5 ತಿಂಗಳ ಗರ್ಭಿಣಿಯಾದ ಬಳಿಕ, ವಿವಾಹಕ್ಕೆ ಅಮರನಾಥ್ ನಿರಾಕರಿಸಿದ್ದಾರೆ. ಹೀಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುಂತೆ ಆಗ್ರಹಿಸಿ ಕೋಲಾರದ ಶ್ರೀನಿವಾಸಪುರದಲ್ಲಿರುವಂತ ಅಮರನಾಥ್ ಮನೆಯ ಮುಂದೆ ಸಂಯುಕ್ತಾ ಧರಣೆ ನಡೆಸುತ್ತಿದ್ದಾರೆ.
ಹೃದಾಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್