ಬೆಂಗಳೂರು: ಜೆಟ್ ಲ್ಯಾಬ್ ಎನ್ನುವಂತ ಪಬ್ ಒಂದರಲ್ಲಿ ನಿಯಮ ಮೀರಿ ತಡರಾತ್ರಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಮಾಡಿದಂತ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿತ್ತು. ನಿಯಮ ಮೀರಿ ಪಾರ್ಟಿ ಮಾಡಿದಂತ ಚಿತ್ರ ತಂಡದ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಗೆ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್ ಹಿನ್ನಲೆಯಲ್ಲಿ ಇದೀಗ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಪಬ್ ಒಂದರಲ್ಲಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿಯನ್ನು ನಡೆಸಲಾಗಿತ್ತು. ಮಧ್ಯರಾತ್ರಿ 1.30ರವರೆಗೆ ಪಾರ್ಟಿಯನ್ನು ನಡೆಸುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಅತಿಯಾದ ಸೌಂಡ್ ಕಾರಣ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ್ದಂತ ಪೊಲೀಸರು ಪರಿಶೀಲನೆ ನಡೆಸಿದಾಗ ನಿಯಮ ಮೀರಿ, ತಡರಾತ್ರಿ ಪಾರ್ಟಿ ಮಾಡುತ್ತಿರೋದು ಕಂಡು ಬಂದಿತ್ತು.
ಈ ಸಂಬಂಧ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಡಾಲಿ ಧನಂಜಯ್, ಸಂಗೀತ ನಿರ್ದೇಶ ವಿ.ಹರಿಕೃಷ್ಣ, ತರುಣ್ ಸುಧೀರ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಸೇರಿದಂತೆ ವಿವಿಧ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಢಾಲಿ ಧನಂಜಯ್, ರಾಕ್ ಲೈನ್ ವೆಂಕಟೇಶ್, ಚಿಕ್ಕಣ್ಣ, ತರುಣ್ ಸುಧೀರ್ ಸೇರಿದಂತೆ ವಿವಿಧ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ವಿಚಾರಣೆಗೆ ಒಟ್ಟಾಗಿ ಹಾಜರಾದರು. ಈ ವೇಳೆ ನಟ ದರ್ಶನ್ ಪಬ್ ಮಾಲೀಕರನ್ನು ವಿಚಾರಣೆ ಮಾಡುವಂತೆ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ.
BREAKING: ನಿಯಮ ಮೀರಿ ‘ಪಾರ್ಟಿ’ ಪ್ರಕರಣ: ‘ನಟ ದರ್ಶನ್’ ಪೊಲೀಸರ ಮುಂದೆ ವಿಚಾರಣೆಗೆ ಹಾಜರ್
BREAKING: ದೇಶದ ಅತಿ ಉದ್ದದ ‘ಸಮುದ್ರ ಸೇತುವೆ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’ | Atal Setu inauguration