ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವವರ ಸಂಖ್ಯೆ 22ಕ್ಕೆ ಇಂದು ಏರಿಕೆಯಾಗಿದೆ. ಈ ಘಟನೆಗಳ ಸಂಬಂಧ 10 ದಿನಗಳಲ್ಲಿ ಪರಿಶೀಲಿಸಿ ವರದಿ ನೀಡುವಂತೆ ತಜ್ಞರ ಸಮಿತಿಗರ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸುಮಾರು 18 ಜನರು ಹೃದಯಘಾತಕ್ಕೆ ಒಳಗಾಗಿ ಸಾವನಪ್ಪಿದ್ದರರೆ ಎಂಬುದಾಗಿ ಸಮೂಹ ಮಾಧ್ಯಮಗಳಲ್ಲಿ ಮತ್ತು ದಿನಪತ್ರಿಕೆಯಲ್ಲಿ ಪ್ರಕಟಣೆಗೊಂಡಿರುತ್ತದೆ ಎಂದಿದ್ದಾರೆ.
ಸದರಿ ವಿಷಯದ ಬಗ್ಗೆ ಈಗಾಗಲೇ ಸರ್ಕಾರದಿಂದ ಸುತ್ತೋಲೆ ಸಂಖ್ಯೆ: ಆಕುಕ 66 ಸಿಜಿಎಂ 2025, ದಿ:05.05.2025ರ ಅನ್ವಯ, ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ಸಂಸ್ಥೆ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯು ಸದರಿ ವಿಷಯವನ್ನು ಸಹ Hassan Institute of Medical Science ಇವರ ಸಹಯೋಗದೊಂದಿಗೆ ಪರಿಶೀಲಿಸಿ, 10 ದಿನಗಳೊಳಗಾಗಿ ವರದಿಯನ್ನು ನೀಡಲು ಸೂಚಿಸಿದ್ದಾರೆ.