ಬುಟ್ಟ ಬೊಮ್ಮ ಹಾಡಿಗೆ ಸಖತ್ ಸ್ಟೆಪ್ ಹಾಕುತ್ತಾ, ಸನ್ ರೈಸರ್ಸ್ ಅಭಿಮಾನಿಗಳ ದಿಲ್ ಖುಷ್ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟರ್ – Kannada News Now


Cricket Other Film Sports

ಬುಟ್ಟ ಬೊಮ್ಮ ಹಾಡಿಗೆ ಸಖತ್ ಸ್ಟೆಪ್ ಹಾಕುತ್ತಾ, ಸನ್ ರೈಸರ್ಸ್ ಅಭಿಮಾನಿಗಳ ದಿಲ್ ಖುಷ್ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟರ್

ಸ್ಪೆಷಲ್ ಡೆಸ್ಕ್ : ವಿಶ್ವದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನೂ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್‌ ಡೇವಿಡ್‌ ವಾರ್ನರ್‌, ತಮ್ಮ ಟಿಕ್‌ ಟಾಕ್‌ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಮುದಗೊಳಿಸುತ್ತಿದ್ದಾರೆ.

ಇತ್ತಿಚೆಗಷ್ಟೇ ತಮ್ಮ ಮಗಳಿಗಾಗಿ ಅಧಿಕೃತವಾಗಿ ಟಿಕ್‌ಟಾಕ್‌ ಆಪ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್‌, ಹಲವು ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದರಲ್ಲಿ ಭಾರತೀಯ ಹಾಡುಗಳೂ ಸೇರಿವೆ.

ಐಪಿಎಲ್ ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕರಾಗಿರುವ ವಾರ್ನರ್ ತಮ್ಮ ಅಭಿಮಾನಿಗಳಿವಾಗಿ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್‌ ಮತ್ತು ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಮುಲೋ ಸಿನಿಮಾದ ‘ಬುಟ್ಟ ಬೊಮ್ಮ’ಗೆ ಸಖತ್‌ ಸ್ಟೆಪ್‌ ಹಾಕಿ ಮಿಂಚಿದ್ದಾರೆ. ಪತ್ನಿ ಕ್ಯಾಂಡೀಸ್‌ ವಾರ್ನರ್‌ ಕೂಡ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಹಿಂದೆ ವಾರ್ನರ್ ಮುದ್ದಿನ ಮಗಳು ಐವೀ ಜೊತೆ ಕಟ್ರೀನಾ ಕೈಫ್‌ ಅವರ ಸೂಪರ್‌ ಹಿಟ್‌ ‘ಶೀಲಾ ಕಿ ಜವಾನಿ’ ಹಾಡಿಗೆ ಸ್ಟೆಪ್‌ ಹಾಕಿದ್ದರು.

 

View this post on Instagram

Indi stealing the show. #buttabomma #iso

A post shared by Mrs Candice Warner (@candywarner1) on