ದಾವಣಗೆರೆ: ನ್ಯಾಕ್ ರೇಟಿಂಗ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚದ ಹಣ ಪಡೆಯುತ್ತಿದ್ದಾಗಲೇ ಸಿಬಿಐ ಬಲೆಗೆ ದಾವಣಗೆರೆ ವಿವಿ ಪ್ರೊ.ಗಾಯತ್ರಿ ದೇವರಾಜ್ ಬಿದ್ದಿದ್ದಾರೆ. ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿಯಾಗಿದ್ದಂತ ಪ್ರೊ.ಗಾಯತ್ರಿ ದೇವರಾಜ್ ಅವರು, ನ್ಯಾಕ್ ಸಮಿತಿಯ ಸದಸ್ಯೆ ಕೂಡ ಆಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ಕೆ ಎಲ್ ಇ ಎಫ್ ವಿವಿಯ ನ್ಯಾಯ್ ಕಮಿಟಿ ಪರಿಶೀಲನೆ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಆಂಧ್ರದ ಕೆ ಎಲ್ ಇ ಎಫ್ ವಿವಿಯು ಸಿಬಿಐಗೆ ದೂರು ನೀಡಿತ್ತು. ಇಂದು ಲಂಚದ ಹಣವನ್ನು ಪಡೆಯುತ್ತಿದ್ದಂತ ಸಂದರ್ಭದಲ್ಲಿ ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಸಿಬಿಐ ಅಧಿಕಾರಿಗಳು ಬಂದಿಸಿದ್ದಾರೆ.
ಬಂಧಿತ ದಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರಿಂದ ಸಿಬಿಐ 37 ಲಕ್ಷ ನಗದು, 6 ಲ್ಯಾಪ್ ಟಾಪ್, ಐಪೋನ್ ವಶಕ್ಕೆ ಪಡೆದಿದೆ. ಈ ಸಂಬಂಧ ಭ್ರಷ್ಟಾಚಾರ, ಲಂಚ ಪ್ರಕರಣ ದಾಖಲಿಸಿಕೊಂಡಿರುವಂತ ಸಿಬಿಐ, ತನಿಖೆ ನಡೆಸುತ್ತಿದೆ.
ಶಿವಮೊಗ್ಗ: ಸೊರಬದಲ್ಲಿ ಕಸಾಪದಿಂದ ಅದ್ಧೂರಿಯಾಗಿ ನಡೆದ ‘ಸುಗ್ಗಿ ಸಂಭ್ರಮ (ಕಣಬ್ಬ)’ ಕಾರ್ಯಕ್ರಮ
SHOCKING : ಈ `ಎಣ್ಣೆ’ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಹೃದಯಾಘಾತದ ಅಪಾಯ ಹೆಚ್ಚಳ.!