ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪ್ರಸಕ್ತ ಸಾಲಿನ ಪಿಹೆಚ್‍ಡಿ ಸಂಶೋಧನಾ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಮಾರ್ಚ್ 10 ರೊಳಗಾಗಿ ವಿಭಾಗವಾರು ಖಾಲಿ ಸ್ಥಾನಗಳ ವಿವರಗಳಿಗಾಗಿ ಹಾಗೂ ಸಂಶೋಧನಾ ಸ್ಥಾನಗಳ ವಿವರಗಳಿಗಾಗಿ ವೆಬ್ ಸೈಟ್ www.davangereuniversity.ac.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.
ಮಹಿಳಾ ಸಬಲೀಕರಣ ಘಟಕದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೇಂದ್ರ ಪುರಸ್ಕøತ ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಿಷನ್ ಸಂಯೋಜಕರ ಒಂದು ಹುದ್ದೆಗೆ ಸಮಾಜ ವಿಜ್ಞಾನ, ಜೀವ ವಿಜ್ಞಾನ, ಪೌಷ್ಠಿಕತೆ, ಔಷಧ, ಆರೋಗ್ಯ ನಿರ್ವಹಣೆ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆಯಲ್ಲಿ ಪದವಿ ಪಡೆದಿದ್ದು. ಸಂಬಂಧಿತ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಗಳಲ್ಲಿ 3 ವರ್ಷ ಅನುಭವ ಹೊಂದಿರಬೇಕು.
ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಂಟ್ ತಜ್ಞರ ಒಂದು ಹುದ್ದೆಗೆ ಅರ್ಥಶಾಸ್ತ್ರ, ಬ್ಯಾಂಕಿಂಗ್, ಇತರೆ ವಿಭಾಗದಲ್ಲಿ ಪದವಿ ಪಡೆದಿದ್ದು. ಸರ್ಕಾರೇತರ ಸಂಸ್ಥೆಗಳೊಂದಿಗೆ 3 ವರ್ಷ ಅನುಭವ ಹೊಂದಿರಬೇಕು.
ಅರ್ಹರು ಕಚೇರಿಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುವೆಂಪು ನಗರ, 14 ನೇ ಮುಖ್ಯ ರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ. ಇಲ್ಲಿಗೆ ಖುದ್ದು ಅಥವಾ ಅಂಚೆ ಮೂಲಕ ಫೆ. 22 ರೊಳಗಾಗಿ ಸಲ್ಲಿಸಲು ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.
ರಾಜ್ಯದ ಜನತೆ ಗಮನಕ್ಕೆ: ಈ ‘ಡೈಡ್ ಲೈನ್’ ಒಳಗೆ ‘ವನ್ಯಜೀವಿ ಅಂಗಾಂಗ’ ವಾಪಾಸ್ ಕೊಡಿ, ಇಲ್ಲ ‘ಕೇಸ್ ಫಿಕ್ಸ್’
BREAKING: ‘ಉತ್ತರಾಖಂಡ ವಿಧಾನಸಭೆ’ಯಲ್ಲಿ ‘ಏಕರೂಪ ನಾಗರಿಕ ಸಂಹಿತೆ ಮಸೂದೆ'(UCC) ಅಂಗೀಕಾರ | UCC Bill