ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವಾ ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗುವ ಆಕಾಂಕ್ಷಿಯೊಬ್ಬರು ತಡವಾಗಿ ಬಂದ ಕಾರಣ ಗುರುಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಆಕೆಯ ಪೋಷಕರು ಕಣ್ಣೀರು ಹಾಕುತ್ತಾ ಆಕ್ರೋಶಗೊಂಡಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ, ಆಕಾಂಕ್ಷಿಯ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ತಂದೆ ಅಳುತ್ತಿರುವುದನ್ನು ಕಾಣಬಹುದು. ” ಅಪ್ಪಾ, ದಯವಿಟ್ಟು ನೀರು ಕುಡಿಯಿರಿ ಮತ್ತು ಶಾಂತವಾಗಿರಿ. ನೀವು ಏಕೆ ಈ ರೀತಿ ವರ್ತಿಸುತ್ತಿದ್ದೀರಿ? ನಾನು ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗುತ್ತೇನೆ. ಇದು ದೊಡ್ಡ ವಿಷಯವಲ್ಲ” ಎಂದು ಆಕಾಂಕ್ಷಿ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ.
” ಒಂದು ವರ್ಷ ವ್ಯರ್ಥವಾಗುತ್ತಾ” ಎಂದು ತಂದೆ ಹೇಳುತ್ತಾರೆ. ಅದಕ್ಕೆ ಆಕೆ ” ಇದು ದೊಡ್ಡ ವಿಷಯವಲ್ಲ. ನಾನು ಇನ್ನೂ ಚಿಕ್ಕವಳು” ಎಂದು ಹೇಳುವುದನ್ನ ಕೇಳಬಹುದು.
ಇನ್ನು ತಂದೆ ಶಾಲಾ ಅಧಿಕಾರಿಗಳನ್ನ ಶಪಿಸುವುದನ್ನ ಕಾಣಬಹುದು. ನಂತರ ತಂದೆ ಮತ್ತು ಮಗಳು ಹೊರಡಲು ನಿರಾಕರಿಸುವ ತಾಯಿಯನ್ನ ಮನವೋಲಿಸಲು ಪ್ರಯತ್ನಿಸುತ್ತಾರೆ, “ನಾನು ಹೋಗುವುದಿಲ್ಲ)” ಎಂದು ಹೇಳುತ್ತಾರೆ.
https://x.com/333maheshwariii/status/1802380621274136598?ref_src=twsrc%5Etfw
ಜೂ.23ಕ್ಕೆ ‘NEET PG’ ಪರೀಕ್ಷೆ, ನಾಳೆ ‘ಪ್ರವೇಶ ಪತ್ರ’ ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ
ದೇಶದ ರೈತರಿಗೆ ಗುಡ್ ನ್ಯೂಸ್ ; ನಾಳೆ ‘ಪಿಎಂ ಕಿಸಾನ್ 17ನೇ ಕಂತು’ ಬಿಡುಗಡೆ, ಅನ್ನದಾತರ ಖಾತೆಗೆ ₹2000 ಜಮೆ
ರಾಜ್ಯದಲ್ಲಿ ಪೆಟ್ರೋಲ್ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಸಚಿವ ಜಮೀರ್ ಅಹ್ಮದ್ ಆಕ್ರೋಶ