ಬೆಂಗಳೂರು: ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಿಇಟಿ-2025ಕ್ಕೆ ನೋಂದಣಿ ಮಾಡಿಕೊಳ್ಳರು ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿ ಕೆಇಎ ಆದೇಶಿಸಿದೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 16-04-2025 ಮತ್ತು 17-04-2025ರಂದು ನಡೆಸಲಾಗುವ ಸಿಇಟಿ-2025ಕ್ಕೆ ಇಲ್ಲಿಯವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸದೇ ಇರುವ ಹಾಗೂ ಶುಲ್ಕವನ್ನು ಪಾವತಿಸದೇ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮತ್ತೆ ದಿನಾಂಕ ವಿಸ್ತರಿಸಿರುವುದಾಗಿ ತಿಳಿಸಿದೆ.
ಆನ್ ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು ದಿನಾಂಕ 24-02-2025ರ ರಾತ್ರಿ 11.59ರವರೆಗೆ ಹಾಗೂ 25-02-2025ರ ಸಂಜೆ 5.30ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಿರುವುದಾಗಿ ಹೇಳಿದೆ.
ಇನ್ನೂ ವಿಶೇಷ ಸೂಚನೆಯಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ಎಲ್ಲಾ ಮಾಹಿತಿ ಸರಿಯಾಗಿ ತುಂಬಿರುವ ಬಗ್ಗೆ ಪರಿಶೀಲಿಸಿಕೊಳ್ಳಿ. ತಪ್ಪಿದ್ದರೇ ಮತ್ತೊಮ್ಮೆ ಲಾಗಿನ್ ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಂತಿಮವಾಗಿ ಸಬ್ ಮಿಟ್ ಮಾಡುವ ಅರ್ಜಿ ಸರ್ವರ್ ನಲ್ಲಿ ಸೇವ್ ಆಗುತ್ತದೆ ಎಂದು ಹೇಳಿದೆ.
ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!
BREAKING: ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕರ ಮೇಲೆ ಆಟೋ ಚಾಲಕನಿಂದ ಹಲ್ಲೆ: ಕುಸಿದು ಬಿದ್ದು ಸಾವು
ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣಕ್ಕೆ HDK ತಕರಾರು: ಡಿಸಿಎಂ ಡಿ.ಕೆ. ಶಿವಕುಮಾರ್