ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವಂತ ಎಸ್ಐಟಿ ಪೊಲೀಸರು, ಇದೀಗ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ತನ್ನ ಮೊಬೈಲ್ ನಿಂದ ಕಳುಹಿಸಿದ್ದಂತ ಅಶ್ಲೀಲ ಮೆಸೇಜ್ ಗಳ ಡೇಟಾವನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.
ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಒಂದೇ ಕಾರಣಕ್ಕೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಅಲ್ಲದೇ ಆತನ ಮೃತದೇಹವನ್ನು ಮೋರಿಗೆ ಎಸೆದಿದ್ದರು.
ಮೃತದೇಹ ಪತ್ತೆಯಾದ ನಂತ್ರ, ರೇಣುಕಾಸ್ವಾಮಿ ಕೊಲೆ ಹಿಂದಿನ ಅಸಲಿ ಕಾರಣ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದದ್ದು ಎಂಬುದಾಗಿ ಪೊಲೀಸರಿಗೆ ತಿಳಿದು ಬಂದಿತ್ತು. ಹೀಗಾಗಿ ಆತನ ಮೊಬೈಲ್ ಸಂಖ್ಯೆಯ ಮೂಲಕ ಆತ ಬಳಸುತ್ತಿದ್ದಂತ ಸಾಮಾಜಿಕ ಜಾಲತಾಣಗಳಲ್ಲಿನ ಡೇಟಾ ಮಾಹಿತಿ ಸಂಗ್ರಹಿಸೋದಕ್ಕೆ ಎಸ್ಐಟಿ ಪೊಲೀಸರು ಮುಂದಾಗಿದ್ದರು.
ರೇಣುಕಾಸ್ವಾಮಿ ಬಳಸುತ್ತಿದ್ದಂತ ಎರಡು ಪೋನ್ ನಂಬರ್ ಗಳ ಪೈಕಿ ಒಂದು ನಂಬರ್ ಪತ್ನಿ ಹೆಸರಿನಲ್ಲಿ ಖರೀದಿಸಿದ್ದರು. ಆ ನಂಬರ್ ನನ್ನು ಸರ್ವೀಸ್ ಪ್ರೊವೈಡಿಂಗ್ ಕಂಪನಿಗೆ ಕಳುಹಿಸಿ, ಎರಡು ಪೋನ್ ನಂಬರ್ ನ ನಕಲಿ ಸಿಮ್ ಕಾರ್ಡ್ ಖರೀದಿಸಿದ್ದಂತ ಪೊಲೀಸರು, ಆತನ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇದಷ್ಟೇ ಅಲ್ಲದೇ ರೇಣುಕಾಸ್ವಾಮಿ ಬಳಸುತ್ತಿದ್ದಂತ ಸಾಮಾಜಿಕ ಖಾತೆಗಳಿಗೆ ಪ್ರವೇಶಿಸಿರುವಂತ ಪೊಲೀಸರು, ಸಿಇಎನ್ ಠಾಣೆಯ ತಜ್ಞರ ಸಹಾಯದಿಂದ ಅದರಲ್ಲಿ ಇದ್ದಂತ ಡೇಟಾವನ್ನು ಕಲೆ ಹಾಕಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ರೂ.300 ಕೋಟಿಗೂ ಹೆಚ್ಚು ಅಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ