ಬೆಂಗಳೂರು: ನಟ ದರ್ಶನ್ ಅವರು ಬೆನ್ನು ನೋವಿನ ಕಾರಣದಿಂದ ನಗರದ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಿಗೆ ಮೂರು ದಿನಗಳ ಹಿಂದೆಯೇ ವೈದ್ಯರು ಲೇಜರ್ ಆಪರೇಷನ್ ಮಾಡಬೇಕು ಎಂದು ಪತ್ನಿ ವಿಜಯ ಲಕ್ಷ್ಮೀಗೆ ತಿಳಿಸಿದ್ದಾರೆ. ಯಾವಾಗ ಆಪರೇಷನ್ ಮಾಡಿಸಬೇಕು. ಎಷ್ಟು ಹೊತ್ತಿಗೆ ಮಾಡಿಸಬೇಕು ಎನ್ನುವ ಬಗ್ಗೆ ಪತ್ನಿ ವಿಜಯ ಲಕ್ಷ್ಮೀ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದಂತ ನಟ ದರ್ಶನ್ ಅವರಿಗೆ ಅನಾರೋಗ್ಯದ ಕಾರಣ ಕೋರ್ಟ್ ಮಧ್ಯಂತರ ಜಾಮೀನನ್ನು ಚಿಕಿತ್ಸೆ ಪಡೆಯಲು ನೀಡಿತ್ತು. ಜೈಲಿನಿಂದ ಬಿಡುಗಡೆಯಾದ ನಂತ್ರ, ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಬೆನ್ನು ನೋವಿನ ಚಿಕಿತ್ಸೆಗಾಗಿ ನಟ ದರ್ಶನ್ ದಾಖಲಾಗಿದ್ದಾರೆ.
ನಟ ದರ್ಶನ್ ಅವರನ್ನು ಎಲ್ಲಾ ಪರೀಕ್ಷೆಗೆ ಒಳಪಡಿಸಿರುವಂತ ವೈದ್ಯರು, ಮೂರು ದಿನಗಳ ಹಿಂದೆ ಲೇಜರ್ ಆಪರೇಷನ್ ಮಾಡೋದಾಗಿ ಪತ್ನಿ ವಿಜಯಲಕ್ಷ್ಮೀ ಅವರಿಗೆ ದಿನಾಂಕ, ಸಮಯ ಗೊತ್ತುಪಡಿಸಿ ತಿಳಿಸುವಂತೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಜ್ಯೋತಿಷಿಯೊಬ್ಬರ ಮೊರೆಯನ್ನು ಹೋಗಿದ್ದಾರೆ ಎನ್ನಲಾಗಿದೆ.
ವಿಜಯಲಕ್ಷ್ಮೀ ಅವರು ಜ್ಯೋತಿಷಿಯನ್ನು ಭೇಟಿಯಾಗಿ, ನಟ ದರ್ಶನ್ ಗೆ ಲೇಜರ್ ಆಪರೇಷನ್ ಮಾಡಿಸೋದಕ್ಕೆ ಯಾವ ದಿನ ಚೆನ್ನಾಗಿದೆ.? ಯಾವ ಸಮಯದಲ್ಲಿ ಮಾಡಿಸಬೇಕು ಎನ್ನುವ ಬಗ್ಗೆ ಕೇಳಿಕೊಂಡು ಬಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಆ ನಂತ್ರ ವೈದ್ಯರಿಗೆ ನಟ ದರ್ಶನ್ ಬೆನ್ನು ನೋವಿನ ಚಿಕಿತ್ಸೆಯ ಪರಿಹಾರವಾಗಿ ಲೇಜರ್ ಆಪರೇಷನ್ ಯಾವಾಗ ಮಾಡಬೇಕು ಎಂಬುದನ್ನು ಪತ್ನಿ ವಿಜಯಲಕ್ಷ್ಮೀ ಫೈನಲ್ ಮಾಡಿ ಹೇಳಿದ ನಂತ್ರ, ಆಪರೇಷನ್ ಮಾಡಲಾಗುತ್ತದೆ ಎನ್ನುಲಾಗುತ್ತಿದೆ.
ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದೇ ನಾನು: ಸಂಸದ ಬಸವರಾಜ ಬೊಮ್ಮಾಯಿ
ಉದ್ಯೋಗ ವಾರ್ತೆ : `ಪವರ್ ಮ್ಯಾನ್’ ಸೇರಿ `KPTCL’ನ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ | KPTCL Recruitment