ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ, ಜಾಮೀನಿನ ಮೇಲೆ ನಟ ದರ್ಶನ್ ಹೊರ ಬಂದಿದ್ದಾರೆ. ಅವರು ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆಯನ್ನು ಮಾಡಿಸಿದ್ದು, ಈ ವೇಳೆ ಮತ್ತೊಬ್ಬ ಕೊಲೆ ಆರೋಪಿ ಜೊತೆಗೆ ಇದ್ದರು.ಆದರೆ ಆತ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿಯಲ್ಲ. ಬೇರೊಂದು ಕೊಲೆ ಪ್ರಕರಣದ ಆರೋಪಿ.
ಪುತ್ತೂರು ಸ್ನೇಹಿತರ ಮಾರ್ಗದರ್ಶನದಿಂದ ದರ್ಶನ್ ಶತ್ರು ಸಂಹಾರ ಪೂಜೆ ನೆರವೇರಿಸಿದ್ದು, ಅವರೊಂದಿಗೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದಾನೆ. 2017ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಯಾಗಿದ್ದ ಪ್ರಜ್ವಲ್ ರೈ ಬಂಧಿತನಾಗಿದ್ದ.
ಆ ಕೊಲೆ ಪ್ರಕರಣದಲ್ಲಿ ಒಟ್ಟು 11 ಜನರ ಬಂಧನವಾಗಿತ್ತು, ಅದರಲ್ಲಿ ಪ್ರಜ್ವಲ್ ರೈ ಸಹ ಒಬ್ಬ. ಈಗ ಇದೇ ಪ್ರಜ್ವಲ್ ರೈ ದರ್ಶನ್ ಅವರನ್ನು ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಕೇರಳದ ಕಣ್ಣೂರಿನಲ್ಲಿ ಇರುವಂತ ಶ್ರೀ ಭಗವತೀ ದೇವಸ್ಥಾನ ಶತ್ರು ಸಂಹಾರ ಪೂಜೆಗೆ ಹೆಸರುವಾಸಿಯಾಗಿರುವಂತ ದೇವಾಲಯವಾಗಿದೆ. ಈ ದೇವಾಲಯಕ್ಕೆ ರಾಜ್ಯ, ರಾಷ್ಟ್ರ, ಹೊರ ದೇಶಗಳಿಂದಲೂ ರಾಜಕಾರಣಗಳು ಸೇರಿದಂತೆ ವಿವಿಧ ವರ್ಗದವರು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ.
ಈ ದೇವಾಲಯದ್ಲಿ ನಟ ದರ್ಶನ್ ಅವರು ಕುಟುಂಬ ಸಮೇತರಾಗಿ ಪ್ರತ್ಯಕ್ಷರಾಗಿರೋದು ಇಂತಹದ್ದೊಂದು ಕುತೂಹಲಕ್ಕೆ ಕಾರಣವಾಗಿದೆ. ಕೇರಳದ ಕಣ್ಣೂರಿನ ಶ್ರೀ ಭಗವತೀ ದೇವಸ್ಥಾನದಲ್ಲಿ ನಟ ದರ್ಶನ್ ಕುಟುಂಬ ಸಹಿತ ಶತ್ರು ಸಂಹಾರ ಪೂಜೆ ಮಾಡಿಸಿದ್ದಾಗಿ ಹೇಳಲಾಗುತ್ತಿದೆ.