ದಾವಣಗೆರೆ: ಪಬ್ ನಲ್ಲಿ ತಡರಾತ್ರಿ ನಿಯಮ ಮೀರಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಮಾಡಿದಂತ ನಟ ದರ್ಶನ್ ಸೇರಿದಂತೆ ವಿವಿಧ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಯ ಶಾಕ್ ನೀಡಿದ್ದರು. ವಿಚಾರಣೆಗೂ ಹಾಜರಾಗಿದ್ದರು. ಇದೇ ಹೊತ್ತಲ್ಲಿ ನಟ ದರ್ಶನ್ ಅಭಿಮಾನಿಯೊಬ್ಬ ಯುವಕನೊಬ್ಬನ ಮೇಲೆ ವಿಕೃತಿ ಮೆರೆದಿರೋ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದ ಮುಂದೆ ನಟ ದರ್ಶನ್ ಅಭಿಮಾನಿಯೊಬ್ಬ ಯುವಕನೊಬ್ಬನ ಬರಿ ಕೈ ಮೇಲೆ ಕರ್ಪೂರ ಹಚ್ಚಿ, ನಟ ದರ್ಶನ್ ಬ್ಯಾನರ್ ಗೆ ಆರತಿ ಮಾಡುವಂತೆ ಸೂಚಿಸಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಬರಿ ಕೈ ಮೇಲೆ ಕರ್ಪೂರ ಹಚ್ಚಿರುವಂತ ದರ್ಶನ್ ಅಭಿಮಾನಿ, ಪೋಸ್ಟರ್ ಗೆ ಮಂಗಳಾರತಿ ಥರ ಬೆಳಗಿಸಿ ವಿಕೃತಿ ಮೆರೆದಿರೋದಾಗಿ ವೀಡಿಯೋದಿಂದ ತಿಳಿದು ಬಂದಿದೆ.
ಇದಷ್ಟೇ ಅಲ್ಲದೇ ಆ ಯುವಕನನ್ನು ಬಸ್ಕಿ ಕೂಡ ಹೊಡೆಸಿದ್ದಾನೆ. ಎರಡು ಕಿವಿ ಹಿಡಿದು ಯುವಕ ಬಸ್ಕಿ ಹೊಡೆಯುತ್ತಿರೋದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವೀಡಿಯೋದಲ್ಲಿ ಕಂಡು ಬಂದಿದೆ.
ಅಂದಹಾಗೇ ಹರಪ್ಪನಹಳ್ಳಿ ಮೂಲದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ವಿರುದ್ಧ ಕೆಟ್ಟದಾಗಿ ಪೋಸ್ಟ್ ಹಾಕುತ್ತಿದ್ದನಂತೆ. ಇಂತಹ ಯುವಕ ಕಾಟೇರ ಸಿನಿಮಾ ನೋಡೋದಕ್ಕೆ ಥಿಯೇಟರ್ ಗೆ ಬಂದಾಗ ಆತನನ್ನು ಹಿಡಿದಂತ ನಟ ದರ್ಶನ್ ಅಭಿಮಾನಿ ದೊಡ್ಡೇಶ್ ಎಂಬಾತ, ದಾವಣಗೆರೆಯ ಗೀತಾಂಜಲಿ ಥಿಯೇಟರ್ ಮುಂದೆ ಹೀಗೆ ವಿಕೃತಿ ಮೆರೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
BREAKING: ಮಣಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಅದ್ಧೂರಿ ಚಾಲನೆ
‘ಮಾಶಾಸನ’ಕ್ಕಾಗಿ 5 ಕಿಮೀ ದೂರ ತೆವಳಿದ ‘ವೃದ್ಧೆ’: ‘ಗ್ಯಾರಂಟಿ’ ಕೊಟ್ಟ ಸರ್ಕಾರಕ್ಕೆ ಕರುಣೆ ಇಲ್ಲವೆಂದ ‘HDK’