ಬೆಂಗಳೂರು:ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆದ ಘಟನೆಗೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ನಟಿ ಸಂಜನಾ ದರ್ಶನ್ ಅರೆಸ್ಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು ಸುದ್ದಿ ಕೇಳಿ ಶಾಕ್ ಆಗಿದೆ ಎಂದಿದ್ದಾರೆ.
ಈ ಸುದ್ದಿ ನೋಡಿ ಶಾಕ್ ಆಗಿದೆ. ಚಿಂತೆ ಕಾಡ್ತಿದೆ. ದೇವರ ಬಳಿ ಪ್ರೇಯರ್ ಮಾಡ್ತೀನಿ. ಅವರು ಅರೆಸ್ಟ್ ಆಗಬಾರದು. ಇದು ಶಾಕಿಂಗ್ ನ್ಯೂಸ್. ಅವರು ಬಿಡುಗಡೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಹೆಸರು ಎಫ್ಐಆರ್ನಲ್ಲಿರಬಾರದು ಎಂದು ಕೇಳಿಕೊಳ್ಳುತ್ತೇನೆ. ನನಗೆ ಮಾತೇ ಬರುತ್ತಿಲ್ಲ’ ಎಂದಿದ್ದಾರೆ ಸಂಜನಾ.
ಇನ್ನೂ ಕೊಲೆಯಾದ ರೇಣುಕಾ ಸ್ವಾಮಿ ಚಿತ್ರದುರ್ಗದ ಬಡಾವಣೆಯೊಂದರಲ್ಲಿ ವಾಸವಾಗಿದ್ದರು.ಅವರ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ.ಇವರಿಗೆ ಕಳೆದ ವರ್ಷವಷ್ಟೇ ಮದುವೆಯಾಗಿದ್ದು ಹೆಂಡತಿ ಗರ್ಭಿಣಿಯಾಗಿದ್ದಾರೆ.ರೇಣುಕಾ ಸ್ವಾಮಿ ಮೆಡಿಕಲ್ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆಗಿದ್ದರು. ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎಂದು ಹೇಳಲಾಗಿದೆ.