ಯಾದಗಿರಿ: ದಲಿತ ಯುವಕನೊಬ್ಬನ ಮರ್ಮಾಂಗಕ್ಕೆ ಮುಸ್ಲೀಂ ಯುವಕನೊಬ್ಬ ಒದ್ದ ಪರಿಣಾಮ, ಸ್ಥಳದಲ್ಲೇ ದಲಿತ ಯುವಕ ಸಾವನ್ನಪ್ಪಿರುವಂತ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ನಗರದ ಶಗಾಪುರಪೇಟೆ ಬಡಾವಣೆಯಲ್ಲಿದ್ದಂತ ರೊಟ್ಟಿ ಕೇಂದ್ರಕ್ಕೆ ನಿನ್ನೆ ರಾತ್ರಿ ದಲಿತ ಯುವಕ ರಾಕೇಶ್ ಎಂಬಾತ ರೊಟ್ಟಿ ತೆಗೆದುಕೊಂಡು ಬರೋದಕ್ಕೆ ತೆರಳಿದ್ದಾನೆ. ರೊಟ್ಟಿ ಖರೀದಿಯ ವೇಳೆಯಲ್ಲಿ ವಾಗ್ವಾದ ನಡೆದು, ಮುಸ್ಲೀಂ ಯುವಕ ಫಯಾಜ್ ಹಾಗೂ ರಾಕೇಶ್ ನಡುವೆ ಗಲಾಟೆಯಾಗಿದೆ.
ಈ ಗಲಾಟೆಯ ಬಳಿಕ ಮನೆಗೆ ರಾಕೇಶ್ ತೆರಳಿದ್ದಾನೆ. ನಂತ್ರ ಮನೆಗೆ ರಾಕೇಶ್ ಮರಳಿದ ನಂತ್ರ ಫಯಾಜ್ ಹಾಗೂ ರಾಕೇಶ್ ನಡುವೆ ಜಗಳವಾಗಿದೆ. ಈ ಗಲಾಟೆಯ ವೇಳೆಯಲ್ಲಿ ಫಯಾಜ್ ಎಂಬಾತ ರಾಕೇಶ್ ಮರ್ಮಾಂಗಕ್ಕೆ ಒದ್ದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಈ ಘಟನೆಯ ನಂತ್ರ ಆರೋಪಿ, ಕೊಲೆಯಾದ ಯುವಕನ ಕುಟುಂಬದ ನಡುವೆ ಸಂಧಾನದ ಮಾತುಕತೆ ನಿನ್ನೆ ರಾತ್ರಿ 11 ಗಂಟೆಯ ಹಾಗೆ ನಡೆದಿದೆ. ಇದಾದ ನಂತ್ರ ಬಿಜೆಪಿ ಮುಖಂಡರು ಮಧ್ಯ ಪ್ರವೇಶಿಸಿ ಕೊಲೆಯಾದ ರಾಕೇಶ್ ತಾಯಿಯಿಂದ ಪೊಲೀಸರಿಗೆ ದೂರು ಕೊಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಯಾದಗಿರಿ ಎಸ್ಪಿ ಸಂಗೀತಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ನಂತ್ರ ರಾಕೇಶ್ ಶವ ಮರಣೋತ್ತರ ಪರೀಕ್ಷೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಂ, ರಮೇಶ್‍ಕುಮಾರ್ ಮೋದಿ ಬಗ್ಗೆ ನೀಡಿದ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಖಂಡನೆ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ