ಕಲಬುರಗಿ: ಯುವಕ ದಲಿತ ಎಂಬ ಕಾರಣಕ್ಕಾಗಿ ಸಲೂನಿಗೆ ತೆರಳಿದ್ದ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ್ದ ಲ್ಲದೆ ಆತನನ್ನು ಕತ್ತರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ಈರಪ್ಪ ಬಂಡಿಹಾಳ (23) ಮೃತ ಯುವಕ. ಇದೇ ಗ್ರಾಮದ ಮುದುಕಪ್ಪ ಅಂದಪ್ಪ ಹಡಪದ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಮುದುಕಪ್ಪನ ಕ್ಷೌರದಂಗಡಿಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಹೋಗಿದ್ದ. ಈ ವೇಳೆ “ನೀನು ಹರಿಜನ (ದಲಿತ) ನಿನಗೆ ಕ್ಷೌರ ಮಾಡುವುದಿಲ್ಲ’ ಎಂದು ಮುದುಕಪ್ಪ ಹೇಳಿ ದ್ದಾನೆ. ಆಗ ಮಾತಿಗೆ ಮಾತು ಬೆಳೆದು, ಮುದಕಪ್ಪ ಕತ್ತರಿಯಿಂದ ಯಮನೂರಪ್ಪನ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.